alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿ ಮೆಟ್ರೋದಲ್ಲಿ ವೃದ್ಧನ ಮೇಲೆ ದೌರ್ಜನ್ಯ

delhi-metro_647_041316121533

ದೆಹಲಿ ಮೆಟ್ರೋದಲ್ಲಿ ಯುವಕರ ಗುಂಪೊಂದು ವೃದ್ಧನಿಗೆ ಸೀಟು ಕೊಡದೇ ಅವಾಚ್ಯವಾಗಿ ನಿಂದಿಸಿದೆ. ಮೆಟ್ರೋ ರೈಲಿನಲ್ಲಿ ಯುವಕರ ಗುಂಪೊಂದು ಆರಾಮಾಗಿ ಕುಳಿತಿತ್ತು. ಅಸಹಾಯಕ ಮುಸಲ್ಮಾನ್ ವೃದ್ಧರೊಬ್ರು ಕುಳಿತುಕೊಳ್ಳಲು ಸೀಟು ಬಿಟ್ಟುಕೊಡುವಂತೆ ಕೇಳಿದ್ದಾರೆ. ಅದಕ್ಕೆ ಒಪ್ಪದ ಯುವಕರು ಸೀಟು ಬೇಕಾದ್ರೆ ಪಾಕಿಸ್ತಾನಕ್ಕೆ ಹೋಗಿ ಅಂತಾ ನಿಂದಿಸಿದ್ದಾರೆ.

AICCTUನ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್ ರಾಯ್ ವೃದ್ಧನ ನೆರವಿಗೆ ಬಂದ್ರು. ಕ್ಷಮೆ ಕೇಳುವಂತೆ ಯುವಕರಿಗೆ ಸೂಚಿಸಿದ್ರು. ಆದ್ರೆ ಅದಕ್ಕೆ ಒಪ್ಪದ ಯುವಕರು ವೃದ್ಧನ ಕಾಲರ್ ಹಿಡಿದು ಬೆದರಿಸಿದ್ದಾರೆ, ಪಾಕಿಸ್ತಾನಕ್ಕೆ ಹೋಗಿಬಿಡು ಅಂತಾ ಹೇಳಿದ್ದಾರೆ. ನಂತರ ಖಾನ್ ಮಾರ್ಕೆಟ್ ಸ್ಟೇಶನ್ ಬಳಿ ರೈಲು ಏರಿದ ಭದ್ರತಾ ಸಿಬ್ಬಂದಿ ಈ ಘರ್ಷಣೆಗೆ ಬ್ರೇಕ್ ಹಾಕಿದ್ದಾನೆ.

ಪಂಡಾರಾ ರೋಡ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿತ್ತು. ಆದ್ರೆ ಕೇಸ್ ಮುಂದುವರಿಸದೇ ಇರಲು ವೃದ್ಧ ನಿರ್ಧರಿಸಿದ್ದಾರಂತೆ. ಯುವಕರ ಕ್ಷಮೆಯನ್ನು ಸ್ವೀಕರಿಸಿದ್ದೇನೆ, ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಕ್ಷಮಿಸಿದ್ದೇನೆ ಅಂತಾ ಲಿಖಿತ ಹೇಳಿಕೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...