alex Certify
ಕನ್ನಡ ದುನಿಯಾ       Mobile App
       

Kannada Duniya

ಹೌಹಾರಿದ ಯುವತಿ ಚಲಿಸುತ್ತಿದ್ದ ಆಟೋದಿಂದ್ಲೇ ಹಾರಿದ್ಲು

bhopal girlಭೋಪಾಲ್: ಆಟೋ ಮತ್ತಿತರ ಬಾಡಿಗೆ ವಾಹನಗಳಲ್ಲಿ ಹೆಣ್ಣುಮಕ್ಕಳು, ಒಂಟಿಯಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಚಾಲಕರು ಕೆಲವೊಮ್ಮೆ ಅನುಚಿತವಾಗಿ, ಅತಿರೇಕದ ವರ್ತನೆ ತೋರಿದ ಘಟನೆಗಳು ನಡೆದಿವೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ.

ಆಟೋದಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಚಾಲಕನೊಬ್ಬ, ಅಸಭ್ಯವಾಗಿ ವರ್ತಿಸಿದ್ದಲ್ಲದೇ, ಕಿರುಕುಳ ನೀಡಲು ಮುಂದಾಗಿದ್ದು, ಇದರಿಂದ ಹೌಹಾರಿದ ಯುವತಿ ಚಲಿಸುತ್ತಿದ್ದ ಆಟೋದಿಂದಲೇ ಹಾರಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಭೋಪಾಲ್ ಸಮೀಪದ ಹೋಶಂಗಾಬಾದ್ ನಿವಾಸಿಯಾಗಿರುವ ಯುವತಿ ಕೆಲಸಕ್ಕೆ ಸೇರಲು ಸಂದರ್ಶನಕ್ಕೆ ಬಂದಿದ್ದು, ನಿಗದಿತ ಸ್ಥಳಕ್ಕೆ ತೆರಳಲು ಆಟೋ ಹತ್ತಿದ್ದಾಳೆ. ಆಗ ಚಾಲಕ ದುರ್ವರ್ತನೆ ತೋರಿದ್ದಾನೆ.

ಆಟೋ ಚಾಲಕನ ವರ್ತನೆಯಿಂದ ಗಾಬರಿಯಾದ ಯುವತಿ ಹಾರಿದ್ದು, ಆಕೆಗೆ ಪೆಟ್ಟಾಗಿದೆ. ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಾಪತ್ತೆಯಾಗಿರುವ ಆಟೋ ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...