alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯಾರಿಕೆಯಾದ್ರೂ ನೀರು ಕುಡಿಯೋಲ್ಲ ವಿದ್ಯಾರ್ಥಿನಿಯರು, ಕಾರಣ ಕೇಳಿದ್ರೆ….

ಆಗ್ರಾದ ಜಮುನಾಪರದಲ್ಲಿರೋ ಮಾಧ್ಯಮಿಕ ಶಾಲೆಯ ಮಕ್ಕಳು ಎಷ್ಟು ಬಾಯಾರಿಕೆಯಾದ್ರೂ ನೀರು ಕುಡಿಯೋದಿಲ್ಲ. ಶಾಲೆ ಬಿಟ್ಟ ತಕ್ಷಣ ಒಂದು ಕ್ಷಣವೂ ತಡಮಾಡದೆ ಮನೆಗೆ ಹೋಗ್ತಾರೆ, ಟಾಯ್ಲೆಟ್ ಗೆ ಧಾವಿಸ್ತಾರೆ. ಯಾಕೆ ಗೊತ್ತಾ? ಈ ಶಾಲೆಯಲ್ಲಿ ಶೌಚಾಲಯವೇ ಇಲ್ಲ.

ಒಟ್ಟು 40 ವಿದ್ಯಾರ್ಥಿನಿಯರು ಇಲ್ಲಿ ಓದುತ್ತಿದ್ದಾರೆ. ಶಾಲೆಯ ಅವಧಿಯಲ್ಲಿ ನೀರು ಕುಡಿದ್ರೆ ಅಥವಾ ಏನನ್ನಾದ್ರೂ ತಿಂದ್ರೆ ಶೌಚಾಲಯಕ್ಕೆ ಹೋಗಬೇಕಾಗುತ್ತದೆ. ಆದ್ರೆ ಇಲ್ಲಿ ಟಾಯ್ಲೆಟ್ ಇಲ್ಲದೇ ಇರೋದ್ರಿಂದ ಬಾಯಾರಿಕೆಯಾದ್ರೂ, ಹಸಿವಾದ್ರೂ ವಿದ್ಯಾರ್ಥಿನಿಯರು ತಡೆದುಕೊಳ್ಳಬೇಕು.

ಹುಡುಗರಿಗೆ ಕೂಡ ಇದೇ ಸಮಸ್ಯೆ. ಆದ್ರೆ ಅವರು ಗಂಡು ಮಕ್ಕಳಾಗಿರೋದ್ರಿಂದ ಅಲ್ಲೇ ಬೀದಿ ಬದಿಯಲ್ಲೆಲ್ಲಾದ್ರೂ ಹೋಗಿ ಮೂತ್ರ ವಿಸರ್ಜಿಸ್ತಾರೆ. ಇಲ್ಲವೇ ಯಮುನಾ ನದಿಯ ತಟಕ್ಕೆ ಹೋಗ್ತಾರೆ. ಆದ್ರೆ ಪ್ರವಾಹದ ಸಂದರ್ಭದಲ್ಲಿ ನದಿಯ ಸಮೀಪ ಕೂಡ ಹೋಗುವಂತಿರಲಿಲ್ಲ.

ಇನ್ನು ಶಿಕ್ಷಕರ ಪಾಡು ಕೂಡ ಹೇಳತೀರದು. ಶಿಕ್ಷಕಿಯರು ಮೂತ್ರ ವಿಸರ್ಜನೆ ಮಾಡಲು ಸಮೀಪದಲ್ಲಿರುವ ವಿದ್ಯಾರ್ಥಿಗಳ ಮನೆಗೆ ಹೋಗ್ತಾರಂತೆ. ಶಾಲೆಗೊಂದು ಶೌಚಾಲಯ ಕಟ್ಟಿಸಿಕೊಡುವಂತೆ ಹತ್ತಾರು ಬಾರಿ ಮನವಿ ಮಾಡಿದ್ರೂ ಶಿಕ್ಷಣಾಧಿಕಾರಿಗಳು ಮಾತ್ರ ಕಿವಿಗೊಟ್ಟಿಲ್ಲ.

ರಾಜ್ಯದಲ್ಲಿರೋ ಸುಮಾರು 500 ಶಾಲೆಗಳಲ್ಲಿ ಶೌಚಾಲಯವಿಲ್ಲ. 800 ಶಾಲೆಗಳಲ್ಲಿ ಶೌಚಾಲಯವಿದ್ರೂ ಅವು ಬಳಸುವ ಸ್ಥಿತಿಯಲ್ಲಿಲ್ಲ. ಸ್ವಚ್ಛತೆಯ ಕೊರತೆಯಿಂದಾಗಿ ಪಾಳು ಬಿದ್ದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...