alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರಿಗೆ ರಾಖಿ ಕಟ್ಟಿ ಮದುವೆ ಗಟ್ಟಿ ಮಾಡಿಕೊಡ್ಲು ಯುವತಿ…!

ರಕ್ಷಾಬಂಧನದ ಹಿನ್ನೆಲೆಯಲ್ಲಿ ಭಾನುವಾರ ರಾಖಿ ವಿಥ್ ಖಾಕಿ ಕಾರ್ಯಕ್ರಮ ನೋಯ್ಡಾದ ಪೊಲೀಸ್ ಠಾಣೆಯಲ್ಲಿ ನಡೆಯುತ್ತಿತ್ತು. ಪೊಲೀಸ್ ಇನ್ಸ್ಫೆಕ್ಟರ್ ಹಾಗೂ ಸಿಬ್ಬಂದಿಗೆ ರಾಖಿ ಕಟ್ಟಿ ರಕ್ಷಣೆ ಕೋರಿದ್ದರು ಹುಡುಗಿಯರು. ಈ ವೇಳೆ ಯುವತಿಯೊಬ್ಬಳು ಅಲ್ಲಿಗೆ ಬಂದು ತನ್ನ ದುಃಖ ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ ಮದುವೆ ಪಕ್ಕಾ ಮಾಡಿಕೊಂಡು ಹೋಗಿದ್ದಾಳೆ.

ಯುವತಿ ತಂದೆ ಒಂದು ವರ್ಷದ ಹಿಂದೆ ಮಗಳ ಮದುವೆ ನಿಶ್ಚಯ ಮಾಡಿದ್ದರಂತೆ. ಮಗಳನ್ನು ಮದುವೆಯಾಗುವ ಹುಡುಗನಿಗೆ ಷರತ್ತು ವಿಧಿಸಿದ್ದರಂತೆ. ಹುಡುಗ ಒಂದು ವರ್ಷದಲ್ಲಿ ಮನೆ ಕಟ್ಟಿದ್ರೆ ಮಗಳನ್ನು ನೀಡುವುದಾಗಿ ಹೇಳಿದ್ದನಂತೆ. ಆದ್ರೆ ನಿಗದಿತ ಸಮಯಕ್ಕೆ ಮನೆ ನಿರ್ಮಾಣವಾಗಿರಲಿಲ್ಲವಂತೆ. ಹಾಗಾಗಿ ಯುವತಿ ತಂದೆ, ಮಗಳ ಮದುವೆಯನ್ನು ಬೇರೆ ಹುಡುಗನ ಜೊತೆ ಮಾಡಲು ನಿರ್ಧರಿಸಿದ್ದರು ಎನ್ನಲಾಗಿದೆ.

ಈ ವಿಷ್ಯವನ್ನು ಪೊಲೀಸ್ ಮುಂದಿಟ್ಟ ಯುವತಿ, ಪೊಲೀಸರಿಗೆ ರಾಖಿ ಕಟ್ಟಿ ಸಹಾಯ ಬೇಡಿದ್ದಾಳೆ. ಹುಡುಗ ಹಾಗೂ ಹುಡುಗಿ ತಂದೆ ಸೇರಿದಂತೆ ಸಂಬಂಧಿಕರನ್ನು ಕರೆಯಿಸಿದ ಮಾತನಾಡಿದ ಪೊಲೀಸರು ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...