alex Certify
ಕನ್ನಡ ದುನಿಯಾ       Mobile App
       

Kannada Duniya

ಫೋನ್ ನಲ್ಲಿ ಪ್ರೀತಿ ಮಾಡಿದ ಹುಡುಗ ಎದುರು ಬಂದಾಗ ದಂಗಾದ್ಲು ಹುಡುಗಿ

ವಿದ್ಯಾರ್ಥಿನಿಯೊಬ್ಬಳಿಗೆ ಮಿಸ್ಡ್ ಕಾಲ್ ಮೂಲಕ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಮದುವೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡ್ರು. ಹುಡುಗನನ್ನು ಭೇಟಿಯಾಗಲು ಹೋದ ವಿದ್ಯಾರ್ಥಿನಿ ಮಾತ್ರ ಮಾತಿನಲ್ಲಿ ಮೋಡಿ ಮಾಡಿದ ವ್ಯಕ್ತಿ ನೋಡಿ ದಂಗಾದ್ಲು.

ಅಷ್ಟಕ್ಕೂ ಫೋನಿನಲ್ಲಿ ಪ್ರೀತಿಯ ಮಾತನಾಡ್ತಿದ್ದ ವ್ಯಕ್ತಿ ಆಕೆ ತಂದೆ ವಯಸ್ಸಿನವನಾಗಿದ್ದ. ಘಟನೆ ನಡೆದಿರುವುದು ಮಧ್ಯಪ್ರದೇಶದ ಭಾಗಲ್ಪುರ್ ನಲ್ಲಿ. ಹುಡುಗಿ ಭೇಟಿಯಾದ ವ್ಯಕ್ತಿ ಆಕೆ ಅಪಹರಣಕ್ಕೂ ಪ್ರಯತ್ನ ಮಾಡಿದ್ದನಂತೆ. ಶುಕ್ರವಾರ ಹುಡುಗಿಯನ್ನು ಪೊಲೀಸರು ರಕ್ಷಿಸಿದ್ದಾರೆ.

ಬಂಧಿತ ಪ್ರೇಮಿ ಹೆಸರು ಸಂದೀಪ್ ಕುಮಾರ್ ಎನ್ನಲಾಗಿದೆ. ಈತ ಮೋಕಮಾದ ನಿವಾಸಿ. ಈತನ ವಯಸ್ಸು 42. ಎಸ್ ಎಸ್ಪಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇಂಟರ್ ಸ್ಕೂಲ್ ವಿದ್ಯಾರ್ಥಿಗೆ ಡಿಸೆಂಬರ್ 1 ರಂದು ಒಂದು ನಂಬರ್ ನಿಂದ ನಿರಂತರವಾಗಿ ಮಿಸ್ಡ್ ಕಾಲ್ ಬಂದಿದೆ.

ತನ್ನ ಮಾತಿನ ಮೂಲಕವೇ ವಿದ್ಯಾರ್ಥಿನಿ ಮನಗೆದ್ದಿದ್ದಾನೆ ವ್ಯಕ್ತಿ. ಸತತ 7 ದಿನಗಳ ಕಾಲ ಇಬ್ಬರೂ ಫೋನಿನಲ್ಲಿ ಮಾತನಾಡಿದ್ದಾರೆ. ಫೋನ್ ನಲ್ಲಿಯೇ ಯುವತಿ ಮದುವೆಯಾಗುವುದಾಗಿ ಹೇಳಿದ್ದಾನೆ ಸಂದೀಪ್. ವಯಸ್ಸು 20 ಎಂದ ಸಂದೀಪ್ ಮದುವೆಯಾಗದಿದ್ದಲ್ಲಿ ವಿಷ ಸೇವಿಸುವುದಾಗಿ ಬೆದರಿಸಿದ್ದಾನೆ. ಬೆದರಿದ ವಿದ್ಯಾರ್ಥಿನಿ ಮದುವೆಗೆ ಒಪ್ಪಿದ್ದಾಳೆ. ಶುಕ್ರವಾರ ವಿದ್ಯಾರ್ಥಿನಿಗೆ ಕರೆ ಮಾಡಿದ ಸಂದೀಪ್ ಭೇಟಿಯಾಗುವಂತೆ ಹೇಳಿದ್ದಾನೆ.

ಟ್ಯೂಷನ್ ನೆಪ ಹೇಳಿ ಮನೆ ಬಿಟ್ಟ ಹುಡುಗಿ ಸಂದೀಪ್ ಭೇಟಿಯಾಗಿದ್ದಾಳೆ. ಆದ್ರೆ ತಂದೆ ವಯಸ್ಸಿನ ವ್ಯಕ್ತಿ ನೋಡಿ ಆಕೆ ಮದುವೆಯಾಗಲು ನಿರಾಕರಿಸಿದ್ದಾಳೆ. ಆದ್ರೆ ಬೆದರಿಸಿ ಆಕೆಯನ್ನು ರೈಲಿನಲ್ಲಿ ಕರೆದೊಯ್ಯಲು ಸಂದೀಪ್ ಮುಂದಾಗಿದ್ದಾನೆ. ಟಾಯ್ಲೆಟ್ ಗೆ ಹೋಗುವ ನೆಪದಲ್ಲಿ ಹುಡುಗಿ ತನ್ನ ಸಹೋದರಿಗೆ ಕರೆ ಮಾಡಿದ್ದಾಳೆ. ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಮಧ್ಯೆ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ನೋಡಿದ ಹುಡುಗಿ ಕೂಗಾಡಲು ಶುರುಮಾಡಿದ್ದಾಳೆ. ಹುಡುಗಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...