alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಆಧಾರ್ ಇಲ್ಲವೆಂದು ಬಾಲಕಿಗೆ ಚಿಕಿತ್ಸೆ ನಿರಾಕರಿಸಿದ ಸರ್ಕಾರಿ ಆಸ್ಪತ್ರೆ

ನವದೆಹಲಿ: ನೋಯ್ಡಾದ ಪ್ರಿಯಾ ಎಂಬ ಒಂಬತ್ತು ವರ್ಷದ ಬಾಲಕಿಗೆ ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣ ನೀಡಿ ದೆಹಲಿಯ ಲೋಕ ನಾಯಕ ಜಯಪ್ರಕಾಶ ನಾರಾಯಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದ ವಿಲಕ್ಷಣ ಘಟನೆಯೊಂದು ನಡೆದಿದೆ.

ಈ ಘಟನೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರ ಗಮನಕ್ಕೆ ಬಂದಿದ್ದು, ಕೂಡಲೇ ಅವರು ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಂಡಿದ್ದಾರೆ.

ಈ ಬೆಳವಣಿಗೆ ರಾಜಕೀಯ ಟೀಕೆಗೆ ಆಹಾರವಾಗಿದ್ದು, ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ಈ ಘಟನೆಯನ್ನು ಪ್ರಸ್ತಾಪಿಸುವ ಜತೆಗೆ ಅಲ್ಲಿನ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಕೇಜ್ರಿವಾಲ್ ಅವರು ದೇಶದ ರಾಷ್ಟ್ರೀಯ ರಾಜಧಾನಿಯನ್ನು ಏಕೆ ವಿಭಜಿಸುತ್ತಿದ್ದಾರೆ? ಆಕೆಗೆ ಸೂಕ್ತ ಚಿಕಿತ್ಸೆ ಸಿಕ್ಕರೆ ನವರಾತ್ರಿ ಸಂದರ್ಭದಲ್ಲಿ ಇದಕ್ಕಿಂತ ಉತ್ತಮ‌ ವಿಷಯ ಬೇರೆ ಇಲ್ಲ” ಎಂದು ಟ್ವೀಟ್ ಮಾಡಿದ್ದರು.

ಕೆಲವು ಗಂಟೆಗಳ ನಂತರ, ಕೇಂದ್ರ ಸಚಿವ ನಡ್ಡಾ ಅವರು ಪ್ರತಿ ಟ್ವೀಟ್ ಮಾಡಿ, ಬಾಲಕಿಯನ್ನು ಸಫ್ಧರ್ ಜಂಗ್ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಹೇಳಿದ್ದರು. ಜತೆಗೆ, ಬಾಲಕಿ ಶೀಘ್ರ ಗುಣಮುಖರಾಗುವಂತೆ ಜಗದಂಬಾ ದೇವತೆಯಲ್ಲಿ ಪ್ರಾರ್ಥಿಸುವುದಾಗಿ ಟ್ವೀಟ್ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...