alex Certify
ಕನ್ನಡ ದುನಿಯಾ       Mobile App
       

Kannada Duniya

ಚುಡಾಯಿಸಿದ್ದನ್ನು ವಿರೋಧಿಸಿದ ಬಾಲಕಿಯನ್ನೇ ಕೊಂದರು

gun girl

ಹೆಣ್ಣುಮಕ್ಕಳು ಒಂಟಿಯಾಗಿ ಓಡಾಡುವುದನ್ನು ಕಂಡರೆ, ಕೆಲವು ಬೀದಿ ಕಾಮಣ್ಣರು ಚುಡಾಯಿಸುವುದು ಇತ್ತೀಚೆಗೆ ಹೆಚ್ಚಾಗಿದ್ದು, ಹೀಗೆ ಚುಡಾಯಿಸುತ್ತಿದ್ದ ಯುವಕರಿಗೆ ಬೈಯ್ದ ಬಾಲಕಿಯೊಬ್ಬಳನ್ನು, ಗುಂಡಿಟ್ಟು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಸೀತಾಪುರದಲ್ಲಿ ಮನೆಗೆಲಸ ಮಾಡುತ್ತಿದ್ದ 15 ವರ್ಷದ ಪಿಂಕಿ ಎಂಬ ಬಾಲಕಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ತನ್ನ ಮನೆಯಿಂದ ಕೆಲಸಕ್ಕೆಂದು ಹೋಗುತ್ತಿದ್ದ ಆಕೆಗೆ ನಿತ್ಯವೂ ಯುವಕರ ಗುಂಪೊಂದು ಕಾಟ ಕೊಡುತ್ತಿತ್ತು. ಕುಲದೀಪ್, ಆತನ ಸ್ನೇಹಿತರಾದ ಪೂಜಾರಿ ಹಾಗೂ ಲೋಕೇಶ್ ಎಂಬುವವರು ಪಿಂಕಿಗೆ ಚುಡಾಯಿಸುತ್ತಿದ್ದರು. ಇದಕ್ಕೆ ಪಿಂಕಿ ವಿರೋಧ ವ್ಯಕ್ತಪಡಿಸುತ್ತಿದ್ದಳು. ಆದರೆ, ಆಕೆಯನ್ನು ಅಡ್ಡಗಟ್ಟಿ ಚುಡಾಯಿಸಿದ್ದಕ್ಕೆ ಜೋರಾಗಿ ರಸ್ತೆಯಲ್ಲೇ ಬೈಯ್ದಿದ್ದಾಳೆ.

ಇದರಿಂದ ಆಕ್ರೋಶಗೊಂಡ ಯುವಕರು ಆಕೆಗೆ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಪಿಂಕಿಯ ತಂದೆ ನೀಡಿರುವ ದೂರಿನ ಆಧಾರದ ಮೇಲೆ ಕ್ರಮಕೈಗೊಂಡಿರುವ ಪೊಲೀಸರು ಕುಲದೀಪ್ ಹಾಗೂ ಪೂಜಾರಿಯನ್ನು ಬಂಧಿಸಿದ್ದಾರೆ. ಲೋಕೇಶ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಸೀತಾಪುರ ಪೊಲೀಸ್ ಅಧೀಕ್ಷಕ ಬಲೇಂದು ಭೂಷಣ್ ಸಿಂಗ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...