alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ದಿನ ಪ್ರೇಮಿ ಜೊತೆ ಇಂಥ ಕೆಲಸ ಮಾಡಿದ್ಲು ವಧು!

ಡೆಹ್ರಾಡೂನ್ ನಲ್ಲಿ ಮದುವೆ ದಿನ ವಧು ಮಾಡಿದ ಕೆಲಸ ಹುಡುಗಿ ಕಡೆಯವರು ತಲೆ ತಗ್ಗಿಸುವಂತೆ ಮಾಡಿದೆ. ಮಗಳ ಕೆಲಸಕ್ಕೆ ಬೇಸತ್ತು ಆಕೆ ಪ್ರೇಮಿ ಜೊತೆಯೇ ಮಗಳ ಮದುವೆ ಮಾಡಿದ್ದಾರೆ ಕುಟುಂಬಸ್ಥರು.

ಘಟನೆ ಡೆಹ್ರಾಡೂನ್ ಹಳ್ಳಿಯೊಂದರಲ್ಲಿ ನಡೆದಿದೆ. ವಧು ಅನೇಕ ದಿನಗಳಿಂದ ಊರಿನ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಈ ವಿಷ್ಯ ಮನೆಯವರಿಗೆ ಹಾಗೂ ಇಡೀ ಗ್ರಾಮಕ್ಕೆ ಗೊತ್ತಾಗಿದೆ. ಪಂಚಾಯತಿ ಕರೆದ ಹಳ್ಳಿ ಮುಖ್ಯಸ್ಥರು ಇನ್ಮುಂದೆ ಪ್ರೇಮಿಗಳು ಭೇಟಿಯಾಗಬಾರದೆಂದು ತಾಕೀತು ಮಾಡಿದ್ದಾರೆ. ಜೊತೆಗೆ ಹುಡುಗಿ ಮದುವೆ ಖರ್ಚನ್ನು ಹುಡುಗನ ಕಡೆಯವರು ನೀಡಬೇಕೆಂದಿದ್ದಾರೆ.

ಕೆಲ ದಿನಗಳಲ್ಲಿಯೇ ಹುಡುಗಿಗೆ ದೆಹಲಿ ವರನನ್ನು ಹುಡುಕಲಾಗಿದೆ. ಸೋಮವಾರ ಮದುವೆ ನಿಶ್ಚಯವಾಗಿತ್ತು. ವರನ ಕಡೆಯವರು ದೆಹಲಿಯಿಂದ ಮದುವೆ ಮಂಟಪಕ್ಕೆ ಬರ್ತಿದ್ದರು. ಆದ್ರೆ ವಧು ಈ ಮದುವೆಗೆ ಸಿದ್ಧಳಿರಲಿಲ್ಲ. ಹಾಗಾಗಿ ಪ್ರೇಮಿ ಜೊತೆ ಓಡಿ ಹೋಗಿದ್ದಾಳೆ. ಇದು ತಿಳಿದ ಹುಡುಗಿ ಕಡೆಯವರು ಎಲ್ಲ ಕಡೆ ಹುಡುಕಿ ಅಂತೂ ಹುಡುಗಿಯನ್ನು ಕರೆ ತಂದಿದ್ದಾರೆ. ಅಷ್ಟರಲ್ಲಾಗಲೇ ವರನ ಕಡೆಯವರು ಮದುವೆ ಮಂಟಪಕ್ಕೆ ಬಂದಿದ್ದು ಅವರಿಗೆ ವಿಷ್ಯ ಗೊತ್ತಾಗಿದೆ. ವಾದ-ವಿವಾದದ ನಂತ್ರವೂ ಹುಡುಗಿ ಪ್ರೇಮಿಯನ್ನು ಬಿಟ್ಟುಕೊಡಲು ಮುಂದಾಗಿಲ್ಲ ಎನ್ನಲಾಗಿದೆ. ವಧುವಿನ ಹಠಕ್ಕೆ ಸೋತ ಕುಟುಂಬಸ್ಥರು ಆಕೆ ಬಯಸಿದ ವರನಿಗೆ ಮದುವೆ ಮಾಡಿ ಕೊಟ್ಟಿದ್ದಾರೆ. ದೆಹಲಿಯಿಂದ ಬಂದ ದಿಬ್ಬಣ ಮದುವೆಯಿಲ್ಲದೆ ಖಾಲಿ ಕೈನಲ್ಲಿ ವಾಪಸ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...