alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ 10 ದಿನವಿರುವಾಗ ದಿಟ್ಟ ನಿರ್ಧಾರ ತೆಗೆದುಕೊಂಡ ಯುವತಿ

ಭಾರತದಲ್ಲಿ ವರದಕ್ಷಿಣೆ ಪಿಡುಗು ಇನ್ನೂ ನಿಂತಿಲ್ಲ. ವರದಕ್ಷಿಣೆ ವಿರುದ್ಧ ಹೋರಾಟ ನಿರಂತರವಾಗಿ ನಡೆಯುತ್ತಿದ್ದರೂ ಸಾಲ ಮಾಡಿ ವರದಕ್ಷಿಣೆ ನೀಡಿ ಮಗಳ ಮದುವೆ ಮಾಡುವ ಕುಟುಂಬಗಳು ಸಾಕಷ್ಟಿವೆ. ಈ ಮಧ್ಯೆ ಡೆಹ್ರಾಡೂನ್ ಯುವತಿಯೊಬ್ಬಳ ದಿಟ್ಟ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಫೆಬ್ರವರಿ 23ರಂದು ಮದುವೆ ನಿಶ್ಚಯವಾಗಿತ್ತು. ಅಕ್ಟೋಬರ್ 5ರಂದು ಎಂಗೇಜ್ಮೆಂಟ್ ನಡೆದಿತ್ತು. ಎರಡು ದಿನಗಳ ಹಿಂದೆ ಯುವತಿ ತಂದೆ-ತಾಯಿಗೆ ಕರೆ ಮಾಡಿದ ರೈಲ್ವೆ ಸಿಬ್ಬಂದಿ ಕಡಿಮೆ ವರದಕ್ಷಿಣೆ ನೀಡಿದ್ದೀರೆಂದು ಗಲಾಟೆ ಮಾಡಿದ್ದಾನೆ. ಇದನ್ನು ವಧು ತಾಯಿ ರೆಕಾರ್ಡ್ ಮಾಡಿದ್ದಾರೆ. ಮದುವೆಗೆ ಮುನ್ನವೇ ವರದಕ್ಷಿಣೆ ಗಲಾಟೆ ಶುರುಮಾಡಿರುವ ಹುಡುಗನನ್ನು ಮದುವೆಯಾಗಲು ವಧು ನಿರಾಕರಿಸಿದ್ದಾಳೆ.

ಈ ಸಂಬಂಧ ಹರವಾಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಚಾರಣೆ ನಡೆಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...