alex Certify
ಕನ್ನಡ ದುನಿಯಾ       Mobile App
       

Kannada Duniya

ಚಲಿಸುತ್ತಿದ್ದ ರೈಲಿನ ಶೌಚಾಲಯದಲ್ಲಿ ನಡೀತು ದುಷ್ಕೃತ್ಯ

ಜಾರ್ಖಂಡದ ಚೈಬಾಸ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಚಲಿಸುತ್ತಿರುವ ರೈಲಿನ ಶೌಚಾಲಯದಲ್ಲಿ ಅತ್ಯಾಚಾರ ನಡೆದಿದೆ. ಭದ್ರತಾ ಸಿಬ್ಬಂದಿ ಚಕ್ರಧರ್ಪುರ್ ರೈಲ್ ಬೋರ್ಡ್ ನ ಭದ್ರತಾ ಸಿಬ್ಬಂದಿ ಮಗಳ ಮೇಲೆ ಅತ್ಯಾಚಾರ ನಡೆದಿದೆ.

ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿರುವ ಪೀಡಿತೆಗೆ ಚಕ್ರಧರ್ಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಘಟನೆ ನಡೆದ 36 ಗಂಟೆ ನಂತ್ರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಮಂಗಳವಾರ ಸಂಜೆ ಐದು ಗಂಟೆ ಸುಮಾರಿಗೆ ಚಕ್ರಧರ್ಪುರ್ ರೈಲ್ವೆ ನಿಲ್ದಾಣಕ್ಕೆ ಬಂದ ಟಾಟಾನಗರ್-ಚಕ್ರಧರ್ಪುರ್ ಪ್ಯಾಸೆಂಜರ್ ರೈಲಿನಿಂದ ಪ್ರಜ್ಞೆ ತಪ್ಪಿದ ಹುಡುಗಿಯನ್ನು ಕೆಳಗಿಳಿಸಲಾಗಿದೆ. ಪ್ರಜ್ಞೆ ಬಂದ ಮೇಲೂ ಹುಡುಗಿ ಮಾತನಾಡುತ್ತಿಲ್ಲ ಎನ್ನಲಾಗಿದೆ.

ರೈಲಿನ ಶೌಚಾಲಯದಲ್ಲಿ ಅತ್ಯಾಚಾರ ನಡೆದಿದೆ ಎಂದು ಪೀಡಿತೆ ಬರೆದು ಮಾಹಿತಿ ತಿಳಿಸಿದ್ದಾಳೆ. 45 ಗಂಟೆಗಳ ನಂತ್ರ ಪೀಡಿತೆಗೆ ವೈದ್ಯಕೀಯ ಪರೀಕ್ಷೆ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಡಿಆರ್ಎಂ ನಿರಾಕರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...