alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಸೇಜ್ ಗೆ ರಿಪ್ಲೈ ಮಾಡದ ಪ್ರಿಯಕರನ ಮೇಲೆ ಅತ್ಯಾಚಾರದ ಕೇಸ್

ಲಾತುರ್ ನಲ್ಲಿ 24 ವರ್ಷದ ಯುವತಿಯೊಬ್ಳು ಪ್ರಿಯಕರನ ಮೇಲಿನ ಕೋಪಕ್ಕೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಅಂತಾ ಸುಳ್ಳು ಪ್ರಕರಣ ದಾಖಲಿಸಿದ್ದಾಳೆ. ಅಕ್ಟೋಬರ್ 9ರಂದು ಪುಣೆಯ ಕೊಂಡ್ವಾ ಪೊಲೀಸ್ ಠಾಣೆಗೆ ಬಂದ ಮಹಿಳೆ ತನ್ನ ಪ್ರಿಯಕರ ಮತ್ತಾತನ ಸ್ನೇಹಿತರ ವಿರುದ್ಧ ದೂರು ನೀಡಿದ್ದಳು.

ಕೊನೆಗೂ ಪೊಲೀಸರು ಆತನನ್ನು ಬಂಧಿಸಿದಾಗ ಅಸಲಿ ವಿಷಯ ಬಹಿರಂಗವಾಗಿದೆ. ಆ ಮಹಿಳೆಯನ್ನು ತಾನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಆಕೆ ಒಂದೇ ಸಮನೆ ಮೆಸೇಜ್ ಮಾಡುತ್ತಿದ್ಲು, ಇದಕ್ಕೆ ರಿಪ್ಲೈ ಮಾಡಲಾಗದೇ ಯುವಕ ಸೋತು ಹೋಗಿದ್ದ. ಅವಳಿಂದ ದೂರವಾಗಲು ಪ್ರಯತ್ನಿಸುತ್ತಿದ್ದ.

ಇದೇ ಕೋಪಕ್ಕೆ ಯುವತಿ ಪ್ರಿಯಕರನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು. ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಇಬ್ಬರ ಜಗಳ ಬಗೆಹರಿದಿದೆ. ಅಕ್ಟೋಬರ್ 27ರಂದು ಮದುವೆಯಾಗಿದ್ದಾರೆ. ಸುಳ್ಳು ಕೇಸ್ ದಾಖಲಿಸಿ ಪೊಲೀಸರ ಸಮಯ ವ್ಯರ್ಥ ಮಾಡಿದ ಯುವತಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಮಾನವೀಯತೆ ಆಧಾರದ ಮೇಲೆ ಬಿಟ್ಟು ಕಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...