alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನಲ್ಲಿ ಕುಳಿತು ಈತ ಮಾಡಿದ್ದಾನೆ ಮಾನಗೇಡಿ ಕೆಲಸ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಸಾರ್ವಜನಿಕ ಸ್ಥಳಗಳಲ್ಲಿ ಕೂಡ ಕಾಮುಕರು ಅಟ್ಟಹಾಸ ಮೆರೆಯುತ್ತಿದ್ದಾರೆ. ರೈಲಿನಲ್ಲಿ ನಡೆದ ಘಟನೆಯೊಂದರ ಬಗ್ಗೆ ಅಸ್ಸಾಂ ಯುವತಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಳೆ.

ಅಕ್ಟೋಬರ್ 1 ರಂದು ಯುವತಿಯರಿಬ್ಬರು ದೆಹಲಿಯಿಂದ ಡೆಹ್ರಾಡೂನ್ ಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ರು. ಅವರ ಎದುರಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಯುವತಿಯರನ್ನು ನುಂಗುವಂತೆ ನೋಡುತ್ತಿದ್ದ. ಅವನ ಎದುರು ಸೀಟಿನಲ್ಲೇ ಕುಳಿತಿದ್ದ ಯುವತಿ ಹೆದರಿ ತನ್ನ ಗೆಳತಿಗೆ ಮೆಸೇಜ್ ಕಳಿಸಿದ್ಲು.

ಕೊನೆಗೆ ಆಕೆ ಅದನ್ನೆಲ್ಲ ವಿಡಿಯೋ ಮಾಡಿಕೊಳ್ಳುವಂತೆ ಸೂಚಿಸಿದ್ದಾಳೆ. ಆದ್ರೂ ಆ ಕಾಮುಕ ಮಾತ್ರ ಸುಮ್ಮನಾಗಲಿಲ್ಲ. ಯುವತಿಯ ಕಡೆಗೆ ನೋಡುತ್ತ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಅದನ್ನೆಲ್ಲ ವಿಡಿಯೋ ಮಾಡಿದ ಯುವತಿ, ಫೇಸ್ಬುಕ್ ನಲ್ಲಿ ಕೂಡ ಪೋಸ್ಟ್ ಮಾಡಿದ್ದಳು.

ಆದ್ರೂ ಆ ವ್ಯಕ್ತಿಗೆ ಮಾತ್ರ ಬುದ್ಧಿ ಬಂದಿಲ್ಲ. ತನ್ನ ಕೃತ್ಯವನ್ನು ಆತ ಮುಂದುವರಿಸಿದ್ದ. ಕೊನೆಗೆ ಯುವತಿ ತನ್ನ ತಾಯಿಯ ಸೀಟಿಗೆ ಹೋಗಿ ಕುಳಿತಿದ್ದಾಳೆ. ಇಂತಹ ಕಾಮಾಂಧರಿಗೆ ಶಿಕ್ಷೆಯಾಗಬೇಕು ಅಂತಾ ಯುವತಿಯರು ಫೇಸ್ಬುಕ್ ಮೂಲಕ ಒತ್ತಾಯಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...