alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಕಣ್ಣಲ್ಲೂ ನೀರು ತರಿಸುತ್ತೆ ಅಜ್ಜಿ-ಮೊಮ್ಮಗಳ ಈ ಫೋಟೋ

ಫೋಟೋ ಭಾವನೆಗಳನ್ನು ವ್ಯಕ್ತಪಡಿಸಲು ಉತ್ತಮ ಮಾಧ್ಯಮ. ಅಕ್ಷರದಲ್ಲಿ ಹೇಳಲಾಗದ್ದನ್ನು ಒಂದು ಫೋಟೋ ಹೇಳುತ್ತದೆ. ಇದಕ್ಕೆ ವೈರಲ್ ಆಗಿರುವ ಮೊಮ್ಮಗಳು-ಅಜ್ಜಿಯ ಫೋಟೋ ಉತ್ತಮ ನಿದರ್ಶನ. ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಫೋಟೋಕ್ಕೆ ಎಲ್ಲರ ಕಣ್ಣು ಒದ್ದೆ ಮಾಡುವ ಶಕ್ತಿಯಿದೆ.

ವಾಸ್ತವವಾಗಿ ಟ್ವೀಟರ್ ನಲ್ಲಿ ವೈರಲ್ ಆಗಿರುವ ಈ ಫೋಟೋ ವೃದ್ಧಾಶ್ರಮದ್ದು. ವಿದ್ಯಾರ್ಥಿನಿ ಶಾಲೆ ಪ್ರವಾಸದ ಹಿನ್ನೆಲೆಯಲ್ಲಿ ವೃದ್ಧಾಶ್ರಮಕ್ಕೆ ಬಂದಿದ್ದಾಳೆ. ಅಲ್ಲಿ ಅಜ್ಜಿ ನೋಡಿ ಭಾವುಕಳಾಗಿದ್ದಾಳೆ. ಮೊಮ್ಮಗಳ ಅಳು ನೋಡಿ ಅಜ್ಜಿ ಕಣ್ಣಲ್ಲೂ ನೀರು ಬಂದಿದೆ.

ವಿದ್ಯಾರ್ಥಿನಿ ಅಜ್ಜಿ ಎಲ್ಲಿ ಎಂದು ಸದಾ ತಂದೆ-ತಾಯಿಯನ್ನು ಕೇಳ್ತಿದ್ದಳಂತೆ. ಅವ್ರು ಅಜ್ಜಿ ಸಂಬಂಧಿಕರ ಮನೆಯಲ್ಲಿದ್ದಾಳೆಂದು ಸುಳ್ಳು ಹೇಳ್ತಿದ್ದರಂತೆ. ಆದ್ರೆ ಪಾಲಕರು ವೃದ್ಧಾಶ್ರಮದಲ್ಲಿ ಅಜ್ಜಿಯನ್ನು ಇಟ್ಟಿರುವ ಸತ್ಯ ಮಗಳಿಗೆ ಗೊತ್ತಾಗಿದೆ. ಈ ಫೋಟೋವನ್ನು ಕ್ರಿಕೆಟರ್ ಹರ್ಭಜನ್ ಸಿಂಗ್ ಕೂಡ ಶೇರ್ ಮಾಡಿದ್ದಾರೆ. ಜೊತೆಗೆ ತಾಯಿಯನ್ನು ದೂರ ಮಾಡಿರುವ ಮಕ್ಕಳ ಮೇಲೆ ಕೋಪ ವ್ಯಕ್ತಪಡಿಸಿದ್ದಾರೆ. ಇಂಥವರು ನಾಚಿಕೆ ಪಡಬೇಕೆಂದು ಟ್ವಿಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...