alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯ್ ಫ್ರೆಂಡ್ ಗೆ ಪ್ರೇಯಸಿ ವಿಧಿಸಿದ ಷರತ್ತು ಕೇಳಿದ್ರೆ ದಂಗಾಗ್ತೀರಾ

ಸಮಯ ಬದಲಾದಂತೆ ಮನುಷ್ಯ ಕೂಡ ಬದಲಾಗ್ತಿದ್ದಾನೆ. ದಂಪತಿ ವಿಚಾರಕ್ಕೆ ಬಂದ್ರೆ ಅವ್ರಲ್ಲೂ ಬದಲಾವಣೆ ಕಾಣಬಹುದು. ಸಾಮಾಜಿಕ ಜಾಲತಾಣಗಳು ಸಂಬಂಧದ ಮೇಲೆ ಮಹತ್ವದ ಪ್ರಭಾವ ಬೀರುತ್ತಿವೆ. ಅತಿ ಬೇಗ ಸಂಬಂಧ ಶುರುವಾಗುವುದೂ ಸಾಮಾಜಿಕ ಜಾಲತಾಣದಿಂದಲೇ, ಸಂಬಂಧ ಹಾಳಾಗುವುದೂ ಸಾಮಾಜಿಕ ಜಾಲತಾಣದಿಂದಲೆ. ಈ ಮಧ್ಯೆ ಹುಡುಗಿಯೊಬ್ಬಳು ಬಾಯ್ ಫ್ರೆಂಡ್ ಗೆ ವಿಧಿಸಿದ ಷರತ್ತು ಎಲ್ಲರ ಗಮನ ಸೆಳೆದಿದೆ.

ಬಾಯ್ ಫ್ರೆಂಡ್ ಗೆ ನಿಯಮ ಜಾರಿ ಮಾಡಿದ ಹುಡುಗಿ, ಅದನ್ನು ಪಾಲಿಸದೇ ಹೋದ್ರೆ ಕೊಲೆ ಮಾಡಲೂ ಸಿದ್ಧ ಎಂದಿದ್ದಾಳೆ. ಆಕೆ ಹಾಕಿದ ಷರತ್ತುಗಳನ್ನು ಕೇಳಿದ್ರೆ ನೀವೂ ದಂಗಾಗ್ತಿರಾ.

ಬಾಯ್ ಫ್ರೆಂಡ್ ಮೊಬೈಲ್ ನಲ್ಲಿ ಯಾವುದೇ ಹುಡುಗಿ ಫೋನ್ ನಂಬರ್ ಇರಬಾರದಂತೆ.

ಬಾಯ್ ಫ್ರೆಂಡ್ ಯಾವುದೇ ಸಾಮಾಜಿಕ ಜಾಲತಾಣದಲ್ಲಿರಬಾರದು.

ಬೈಕ್ ನಲ್ಲಿ ಪ್ರೇಯಸಿ ಬಿಟ್ಟು ಮತ್ತ್ಯಾರನ್ನೂ ಕರೆದುಕೊಂಡು ಹೋಗಬಾರದು.

ವಾರದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಸ್ನೇಹಿತರ ಜೊತೆ ಸುತ್ತಾಡಬಾರದು.

ಅಪ್ಪಿತಪ್ಪಿಯೂ ಬೇರೆ ಹುಡುಗಿಯರನ್ನು ನೋಡಬಾರದು.

ಯಾವುದೇ ವಿಚಾರಕ್ಕೂ ಬಾಯ್ ಫ್ರೆಂಡ್ ಕೋಪಗೊಳ್ಳಬಾರದು. ಗೆಳತಿ ಮೇಲೆ ಕೂಗಾಡಬಾರದು.

ಗೆಳೆಯ ಮದ್ಯಪಾನ ಮಾಡಬಾರದು.

ಬೇಕಾದಾಗ ಫೋನ್ ಚೆಕ್ ಮಾಡಲು ಹುಡುಗಿಗೆ ಹಕ್ಕು ನೀಡಬೇಕು.

ಮನೆಗೆ ಬೇರೆ ಹುಡುಗಿ ಬರಬಾರದು.

ಇಬ್ಬರೂ ಮನೆಯಲ್ಲಿರುವಾಗ ಸ್ನೇಹಿತರಿಗೆ ಮನೆಗೆ ಬರಲು ಅವಕಾಶ ನೀಡಬಾರದು.

ಬಾಯ್ ಫ್ರೆಂಡ್ ಬೇರೆ ಹುಡುಗಿ ಜೊತೆ ಸಿಕ್ಕಿಬಿದ್ರೆ ಹತ್ಯೆ ಮಾಡುವುದಾಗಿ ಷರತ್ತು ವಿಧಿಸಿದ್ದಾಳೆ ಹುಡುಗಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...