alex Certify
ಕನ್ನಡ ದುನಿಯಾ       Mobile App
       

Kannada Duniya

ಅಂತಿಂತವಳಲ್ಲ ಈ ಹುಡುಗಿ…!

ಉತ್ತರ ಪ್ರದೇಶದ ಬಿಜನೋರಾದಲ್ಲಿ ನವ ವಧು ಪೊಲೀಸ್ ಠಾಣೆಯಲ್ಲೇ ಪತಿಗೆ ಕಪಾಳಮೋಕ್ಷ ಮಾಡಿದ್ದಾಳೆ. ನಾಟಕವಾಡಿದ ವಧು, ನೇಣು ಬಿಗಿದುಕೊಳ್ಳುವುದಾಗಿ ಹೆದರಿಸಿದ್ದಾಳೆ. ಇಷ್ಟಕ್ಕೂ ವರ, ನವ ವಧುವಿನ ವಿರುದ್ಧ ದರೋಡೆ ಹಾಗೂ ವಂಚನೆ ದೂರು ದಾಖಲಿಸಿದ್ದ. ವಿಶೇಷವೆಂದ್ರೆ ಕಪಾಳಮೋಕ್ಷ ಮಾಡಿದ ವಧು ಮೂಲತಃ ಪೊಲೀಸರು ಹುಡುಕುತ್ತಿದ್ದ ಆರೋಪಿಯಾಗಿದ್ದಾಳೆ.

ಬಿಜನೋರ್ ಠಾಣೆಗೆ ಫೆಬ್ರವರಿ 24ರಂದು ಬಂದಿದ್ದ ದೇವೇಂದ್ರ ಪತ್ನಿ ನೇಹಾ ವಿರುದ್ಧ ದೂರು ನೀಡಿದ್ದ. ಫೆಬ್ರವರಿ 14ರಂದು ನೇಹಾ ಜೊತೆ ಮದುವೆ ನಡೆದಿತ್ತು. ನೇಹಾ ಕುಟುಂಬಸ್ಥರು ಮದುವೆಗಾಗಿ 80 ಸಾವಿರ ರೂಪಾಯಿ ಪಡೆದಿದ್ದರು. ಆದ್ರೆ ಮದುವೆ ಮರುದಿನ ಚಿಕನ್ ತಿನ್ನುವ ಆಸೆ ವ್ಯಕ್ತಪಡಿಸಿ ನಶೆ ಮಾತ್ರೆ ನೀಡಿ ರಾತ್ರಿ ಬೆಳಗಾಗೋದ್ರಲ್ಲಿ ಆಭರಣ ಲೂಟಿ ಮಾಡಿದ್ದಾಳೆಂದು ದೇವೇಂದ್ರ ದೂರು ನೀಡಿದ್ದ.

ದೂರು ನೀಡಿದ ಎರಡು ದಿನ ಬಿಟ್ಟು ನೇಹಾ ಪೊಲೀಸ್ ಠಾಣೆಗೆ ಬಂದಿದ್ದಾಳೆ. ಈ ವಿಷ್ಯ ತಿಳಿದು ದೇವೇಂದ್ರ ಕುಟುಂಬ ಕೂಡ ಅಲ್ಲಿಗೆ ಬಂದಿದೆ. ಆದ್ರೆ ದೇವೇಂದ್ರನನ್ನು ನೋಡಿ ಕೋಪಗೊಂಡ ನೇಹಾ ಪೊಲೀಸ್ ಮುಂದೆಯೇ ಕಪಾಳಮೋಕ್ಷ ಮಾಡಿದ್ದಾಳೆ. ಜೊತೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ನೀಡಿದ್ದಾಳೆ. ಎಲ್ಲ ಮುಗಿದ ಮೇಲೆ ನೇಹಾ ಫೋನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಗ ನೇಹಾ ಬಣ್ಣ ಬಯಲಾಗಿದೆ.

ನೇಹಾ ಮದುವೆ ನಾಟಕವಾಡಿ ಅನೇಕ ಹುಡುಗರಿಗೆ ಮೋಸ ಮಾಡಿದ್ದು ಗೊತ್ತಾಗಿದೆ. ಜೊತೆಗೆ ಕೆಲ ಹುಡುಗರ ಜೊತೆ ಚಾಟಿಂಗ್ ಮಾಡ್ತಿರುವುದನ್ನು ನೋಡಿದ ಪೊಲೀಸರು ಮರುದಿನ ನೇಹಾಳನ್ನು ಬಂಧಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...