alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರಿ ಮೈದುನನ ಜೊತೆ ಪ್ರೀತಿ, ಮನೆ ಮುಂದೆ ಹೈಡ್ರಾಮಾ

ಉತ್ತರ ಪ್ರದೇಶದ ಯುವತಿಗೆ ತನ್ನ ಸಹೋದರಿ ಮೈದುನನ ಮೇಲೆ ಪ್ರೀತಿ ಚಿಗುರಿದೆ. ಇಬ್ಬರೂ ಒಂದಾಗಿ ಜೀವನ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ. ಆದ್ರೆ ಈ ವಿಷ್ಯ ಹುಡುಗನ ಮನೆಯವರಿಗೆ ತಿಳಿದಾಗ ಪ್ರೇಮಿಗಳ ಎಲ್ಲ ಕನಸು ತಲೆಕೆಳಗಾಗಿತ್ತು.

ಪರೇಹರಾಪುರ್ ನಿವಾಸಿ ರಾಮಕುಮಾರನ ಪುತ್ರಿ ಶಿಲ್ಪಾ ಮದುವೆ ರಾಜ್ಪುರದ ಸತೀಶ್ ಜೊತೆ ನೆರವೇರಿತ್ತು. ಶಿಲ್ಪಾ ಸಹೋದರಿ ಅರ್ಚನಾ ಅಕ್ಕನ ಮನೆಗೆ ಆಗಾಗ ಬರ್ತಿದ್ದಳು. ಶಿಲ್ಪಾ ಮೈದುನ ರಾಜೇಶ್ ಜೊತೆ ಅರ್ಚನಾಗೆ ಪ್ರೀತಿ ಶುರುವಾಗಿದೆ. ಇಬ್ಬರೂ ಮದುವೆಯಾಗುವ ನಿರ್ಧಾರ ಕೈಗೊಂಡಿದ್ದಾರೆ.ಈ ಸಂಗತಿ ಮನೆಯವರ ಕಿವಿಗೂ ಬಿದ್ದಿದೆ.

ರಾಜೇಶ್ ಕುಟುಂಬಸ್ಥರು ಮದುವೆಗೆ ನಿರಾಕರಿಸಿದ್ದಾರೆ. ಇದ್ರಿಂದ ಕೋಪಗೊಂಡ ಅರ್ಚನಾ, ರಾಜೇಶ್ ಮನೆ ಮುಂದೆ ಬಂದು ಗಲಾಟೆ ಮಾಡಿದ್ದಾಳೆ.ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾಳೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಎರಡೂ ಕಡೆಯವರ ಜೊತೆ ಮಾತುಕತೆ ನಡೆಸಿದ ಪೊಲೀಸರು ಕೊನೆಯಲ್ಲಿ ಮದುವೆಗೆ ಒಪ್ಪಿಸಿದ್ದಾರೆ. ದೇವಸ್ಥಾನದಲ್ಲಿ ಇಬ್ಬರ ಮದುವೆ ನಡೆದಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...