alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮಹತ್ಯೆಗೆ ಮುಂದಾಗಿದ್ದವಳ ಪ್ರಾಣ ಉಳಿಸಿದೆ ಗೂಗಲ್

google

ಆಕೆ ಉತ್ತರಪ್ರದೇಶದ ರಾಯ್ ಬರೇಲಿಯ 24 ವರ್ಷದ ಯುವತಿ. ಮನೆಯವರ ಒತ್ತಡದಿಂದಾಗಿ ಪ್ರಿಯತಮ ಅವಳಿಂದ ದೂರವಾಗಿದ್ದ. ಹಲವು ವರ್ಷದಿಂದ ಇಬ್ಬರೂ ಪರಸ್ಪರ ಪ್ರೀತಿಸ್ತಾ ಇದ್ರು, ಇತ್ತೀಚೆಗಷ್ಟೆ ಅವನಿಗೆ ಸರ್ಕಾರಿ ಉದ್ಯೋಗ ಸಿಕ್ಕಿದೆಯಂತೆ. ಆಗಿನಿಂದ ಮನಸ್ಸು ಬದಲಾಯಿಸಿರುವ ಯುವಕ, ಪ್ರಿಯತಮೆಯನ್ನು ಮದುವೆಯಾಗದೇ ಇರಲು ನಿರ್ಧರಿಸಿದ್ದ.

ಇದರಿಂದ ಬದುಕೇ ಬೇಡ ಎನಿಸಿ ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ಲು. ಯಮುನಾ ನದಿಗೆ ಹಾರಿ ಪ್ರಾಣ ಬಿಡೋಣ ಎಂದುಕೊಂಡು ನದಿಯ ಕಡೆಗೆ ಹೊರಟಿದ್ಲು. ಆತ್ಮಹತ್ಯೆ ಮಾಡಿಕೊಳ್ಳಲು ಇನ್ನೇನಾದ್ರೂ ಸುಲಭ ಮಾರ್ಗವಿದೆಯಾ ನೋಡೋಣ ಎಂದುಕೊಂಡು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾಳೆ.

‘How to commit suicide’ ಅಂತಾ ಗೂಗಲ್ ಸರ್ಚ್ ಮಾಡಿದಾಗ ಸಹಾಯವಾಣಿ ಸಂಖ್ಯೆಗಳು ಬಂದಿವೆ. ಆ ನಂಬರ್ ಗೆ ಕರೆ ಮಾಡಿದಾಗ ಡಿಐಜಿ ಮಾತನಾಡಿದ್ರು. ತೀರಾ ನೊಂದಿದ್ದ ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರೋದಾಗಿ ತಿಳಿಸಿದ್ಲು. ಕೂಡಲೇ ಕಚೇರಿಗೆ ಕರೆಸಿಕೊಂಡು ಆಕೆಯ ಕಥೆಯನ್ನೆಲ್ಲ ಆಲಿಸಿದ ಡಿಐಜಿ ಜಿತೇಂದ್ರ ಕುಮಾರ್ ಶಾಹಿ ಅವಳನ್ನ ಸಮಾಧಾನಪಡಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವೊಲಿಸಿದ್ದಾರೆ. ಈ ಕೇಸನ್ನು ಡಿಐಜಿ, ಮಹಿಳಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗೆ ಒಪ್ಪಿಸಿದ್ದಾರೆ. ಯುವಕನನ್ನೂ ಠಾಣೆಗೆ ಕರೆಸಿ ಇಬ್ಬರ ಜೊತೆಗೂ ಚರ್ಚಿಸಿ ಪ್ರಕರಣ ಸುಖಾಂತ್ಯ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...