alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಬಂಧದ ಕತೆ ಕಟ್ಟಿದ್ದವನಿಗೆ ಯುವತಿಯಿಂದ ಗೂಸಾ

ರಾಜಸ್ಥಾನದಲ್ಲಿ ಕಿರುಕುಳ ನೀಡುತ್ತಿದ್ದ ಪುಂಡನಿಗೆ ಯುವತಿಯೊಬ್ಬಳು ಹಿಗ್ಗಾಮುಗ್ಗಾ ಥಳಿಸಿದ್ದು, ಈ ದೃಶ್ಯ ಸದ್ಯ ಸಾಮಾಜಿಕ ತಾಣದಲ್ಲಿ ಭಾರೀ ಸದ್ದು ಮಾಡ್ತಾ ಇದೆ.

ಯುವಕನ ಕಿರುಕುಳದಿಂದ ರೋಸತ್ತು ಹೋಗಿದ್ದ ಯುವತಿ ಕೊನೆಗೆ ಸಾರ್ವಜನಿಕವಾಗಿಯೇ ಆತನಿಗೆ ತಕ್ಕ ಪಾಠ ಕಲಿಸಿದ್ದಾಳೆ.

ಕಿರುಕುಳ ನೀಡುತ್ತಿದ್ದ ಯುವಕ ಊರಿನಲ್ಲಿ ಈಕೆ ನನ್ನ ಪ್ರೇಯಸಿ ಎಂದು ಗಾಳಿ ಸುದ್ದಿಯನ್ನು ಹಬ್ಬಿಸಿದ್ದ. ಅಲ್ಲದೆ ಪ್ರತಿ ದಿನ 4 ರಿಂದ 5 ಬಾರಿ ಇವಳ ಜೊತೆ ಮಾತನಾಡುತ್ತಿರೋದಾಗಿ ಹೇಳಿದ್ದನಂತೆ. ಇದ್ರಿಂದ ಆಕ್ರೋಶಗೊಂಡ ಯುವತಿ ತನ್ನ ಹೆಸರು ಹಾಳು ಮಾಡ್ತಾ ಇದ್ದಾನೆ ಎಂದು ಧರ್ಮದೇಟು ನೀಡಿದ್ದಾಳೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...