alex Certify
ಕನ್ನಡ ದುನಿಯಾ       Mobile App
       

Kannada Duniya

ತಪ್ಪಿಸಿಕೊಂಡಿದ್ದ ಬಾಲಕಿ ಮನೆ ತಲುಪಲು ನೆರವಾಯ್ತು ಗೂಗಲ್ ಮ್ಯಾಪ್

ರಾಷ್ಟ್ರರಾಜಧಾನಿಯಲ್ಲಿ ದೆಹಲಿಯಲ್ಲಿ ಆಶ್ಚರ್ಯಕರ ಘಟನೆ ನಡೆದಿದೆ. ಮನೆಯವರಿಂದ ತಪ್ಪಿಸಿಕೊಂಡಿದ್ದ ಬಾಲಕಿಯನ್ನು ಗೂಗಲ್ ಮ್ಯಾಪ್ ಸಹಾಯದಿಂದ ಪೊಲೀಸರು ಮನೆಗೆ ತಲುಪಿಸಿದ ಘಟನೆ ನಡೆದಿದೆ. ಏಳು ವರ್ಷದ ಬಾಲಕಿ ಆಟವಾಡ್ತಾ ಮನೆಯಿಂದ ಹೊರಗೆ ಬಂದಿದ್ದಳು. ಆದ್ರೆ ವಾಪಸ್ ಮನೆಗೆ ಹೋಗುವುದು ಆಕೆಗೆ ಕಷ್ಟವಾಗಿತ್ತು.

ರಸ್ತೆಯಲ್ಲಿ ಪೊಲೀಸ್ ಪೇದೆಗೆ ಬಾಲಕಿ ಸಿಕ್ಕಿದ್ದಳು. ಆಕೆಯನ್ನು ಠಾಣೆಗೆ ಕರೆ ತಂದ ಪೇದೆ ಮನೆ ಬಗ್ಗೆ ವಿಚಾರಿಸಿದ್ದರು. ಆದ್ರೆ ಬಾಲಕಿಗೆ ಊರಿನ ಹೆಸರು ಗೊತ್ತಿರಲಿಲ್ಲ. ಮದುವೆಗೆಂದು ದೆಹಲಿಗೆ ಬಂದಿದ್ದೇವೆ. ಸುಮಾರು 5 ಗಂಟೆಗಳ ಕಾಲ ಜರ್ನಿ ಮಾಡಿದ್ದೇವೆಂದು ಬಾಲಕಿ ಹೇಳಿದ್ದಳು. ನಮ್ಮ ಮನೆ ಬಳಿ ಕೊಳವಿದೆ ಎಂದು ಬಾಲಕಿ ಮಾಹಿತಿ ನೀಡಿದ್ದಳು.

ಇಷ್ಟು ಮಾಹಿತಿ ಮೇಲೆ ಗೂಗಲ್ ಆ್ಯಪ್ ನಲ್ಲಿ ಸರ್ಚ್ ಶುರುಮಾಡಿದ ಪೊಲೀಸರಿಗೆ ಬಾಲಕಿ ಮೀರತ್ ಕಡೆಯವಳು ಎಂಬುದು ಗೊತ್ತಾಗಿದೆ. ನಂತ್ರ ಮೀರತ್ ಸುತ್ತಮುತ್ತ ಕೊಳ ಯಾವ ಊರಿನಲ್ಲಿದೆ ಎಂದು ಪತ್ತೆ ಹಚ್ಚಿದಾಗ ಬಾಲಕಿ ಕೋಲ ಊರಿನವಳು ಎಂಬುದು ಗೊತ್ತಾಗಿದೆ. ಸ್ಥಳೀಯ ಆಡಳಿತದ ಸಹಾಯ ಪಡೆದು ಬಾಲಕಿಯನ್ನು ಮನೆಗೆ ಬಿಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...