alex Certify
ಕನ್ನಡ ದುನಿಯಾ       Mobile App
       

Kannada Duniya

ಎಂ.ಪಿ. ಎದುರಲ್ಲೇ ಯುವತಿಯ ಪ್ಯಾಂಟ್ ಬಿಚ್ಚಿಸಿದರು

sakshi m 5

ಸಂಸ್ಕೃತಿ, ಪರಂಪರೆ, ಹೆಣ್ಣು ಮಕ್ಕಳ ಬಗ್ಗೆ ಅಪಾರ ಕಾಳಜಿ ತೋರುವ ಬಿಜೆಪಿ ನಾಯಕ ಹಾಗೂ ಉನ್ನಾವೋ ಲೋಕಸಭೆ ಕ್ಷೇತ್ರದ ಸದಸ್ಯ ಸಾಕ್ಷಿ ಮಹಾರಾಜ್ ಕಣ್ಣೆದುರಿನಲ್ಲೇ, ಯುವತಿಯೊಬ್ಬಳ ಮೇಲೆ ಅಮಾನವೀಯ ವರ್ತನೆ ತೋರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮೈನ್ ಪುರಿಯಲ್ಲಿರುವ ಬಿಜೆಪಿ ನಾಯಕ ಮೈದೀನ್ ಸಿಂಗ್ ಮನೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿಗೆ ಸಮೀಪದ ಗ್ರಾಮದಲ್ಲಿರುವ ಮನೆಯ ಮೇಲೆ ಪೊಲೀಸರು ದಾಳಿ ಮಾಡಿದ್ದರು. ದಾಳಿಯ ಸಂದರ್ಭದಲ್ಲಿ ಕುಟುಂಬ ಸದಸ್ಯರ ಮೇಲೆ ಪೊಲೀಸರು ತೀವ್ರವಾಗಿ ಥಳಿಸಿ, ದೌರ್ಜನ್ಯ ನಡೆಸಿದ್ದರು. ಈ ಕುಟುಂಬದವರನ್ನು ಮೈದೀನ್ ಸಿಂಗ್ ಮನೆಯಲ್ಲಿ ಸಂಸದ ಸಾಕ್ಷಿ ಮಹಾರಾಜ್ ಭೇಟಿ ಮಾಡಿದ್ದಾರೆ. ದೌರ್ಜನ್ಯದಿಂದ ಗಾಯಗೊಂಡ ಯುವತಿಯ ಪ್ಯಾಂಟ್ ಅನ್ನು ಬಲವಂತವಾಗಿ ಬಿಚ್ಚಿಸಿ ಸಾಕ್ಷಿ ಮಹಾರಾಜ್ ಗೆ ಗಾಯ ತೋರಿಸಲಾಗಿದೆ.

ಸಾಕ್ಷಿ ಮಹಾರಾಜ್ ಎದುರಿನಲ್ಲೇ, ಕ್ಯಾಮೆರಾ ಕಣ್ಣೆದುರಿನಲ್ಲೇ ಹೀಗೆ ಯುವತಿಯ ಪ್ಯಾಂಟ್ ಒತ್ತಾಯಪೂರ್ವಕವಾಗಿ ಬಿಚ್ಚಿಸಿ ಗಾಯ ತೋರಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ. ಸಾಕ್ಷಿ ಮಹಾರಾಜ್ ಕಣ್ಣೆದುರಿನಲ್ಲೇ ಇಂತಹ ಕೃತ್ಯ ನಡೆದಿರುವುದು ವಿವಾದ ಸೃಷ್ಠಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...