alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಾಗಿ ಇಂಥ ಸುಳ್ಳು ಹೇಳಿದ ಹುಡುಗಿ…!

ಬರೇಲಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೇಮಿಯನ್ನು ಮದುವೆಯಾಗುವ ಹುಚ್ಚಿಗೆ ಹುಡುಗಿಯೊಬ್ಬಳು ಅಪಹರಣ ಹಾಗೂ ಸಾಮೂಹಿಕ ಅತ್ಯಾಚಾರದ ಕಥೆ ಹೆಣೆದಿದ್ದಾಳೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ ಪೊಲೀಸರು 24 ಗಂಟೆಯಲ್ಲಿ ಹುಡುಗಿ ಬಣ್ಣ ಬಯಲು ಮಾಡಿದ್ದಾರೆ.

ಹೊಟ್ಟೆ ನೋವಿನ ನೆಪ ಹೇಳಿ ಕಾಲೇಜಿನಿಂದ ಬಂದ ಹುಡುಗಿ ವಾಹನವೊಂದನ್ನು ಏರಿ ಹೈವೆ ಬಳಿ ಬಂದಿದ್ದಳು. ಅಲ್ಲಿ ಆಕೆ ಚಪ್ಪಲಿ ಹಾಳಾಯ್ತು. ಹಾಗಾಗಿ ಬರಿಗಾಲಿನಲ್ಲಿ ಬರ್ತಿದ್ದಳು ಎನ್ನಲಾಗಿದೆ. ಬರಿಗಾಲಿನಲ್ಲಿ ಬರ್ತಿದ್ದ ಹುಡುಗಿಯನ್ನು ನೋಡಿದ ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಹುಡುಗಿ ಅಪಹರಣ ಹಾಗೂ ಸಾಮೂಹಿಕ ಅತ್ಯಾಚಾರದ ಕಥೆ ಹೇಳಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿ ಟಿವಿ ವಶಕ್ಕೆ ಪಡೆದಿದ್ದಾರೆ. ಸಿಸಿ ಟಿವಿಯಲ್ಲಿ ಹುಡುಗಿಯನ್ನ ಅಪಹರಿಸಿದ ಯಾವುದೇ ಸುಳಿವು ಸಿಗಲಿಲ್ಲ. ಹುಡುಗಿ ಮೊಬೈಲ್ ಪಡೆದು ವಿಚಾರಣೆ ನಡೆಸಿದಾಗ ಅಜಯ್ ಎಂಬಾತನ ಬಗ್ಗೆ ತಿಳಿದಿದೆ. ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಲು ಶುರು ಮಾಡಿದ್ದಾರೆ. ಇದ್ರಿಂದ ಭಯಗೊಂಡ ಹುಡುಗಿ ಪ್ರೇಮಿಗಾಗಿ ಪೊಲೀಸ್ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...