alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ನಲ್ಲಿ ಸ್ನೇಹ, ಹೊಟೇಲ್ ನಲ್ಲಿ ಸಂಬಂಧ….ಕೊನೆಗೂ ಮೋಸ ಹೋದ ಹುಡುಗ

ಇದು ಇಂಟರ್ನೆಟ್ ಜಗತ್ತು. ಸಮಯದ ಅಭಾವ ಹಾಗೂ ಕೆಲ ಆಕರ್ಷಣೆಗೆ ಒಳಗಾಗಿ ಜನ ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ತಾರೆ. ನಂತ್ರ ಮೋಸ ಹೋಗಿ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ತಾರೆ. ಇಂಥಹದ್ದೇ ಘಟನೆ ಜೈಪುರದಲ್ಲಿ ನಡೆದಿದೆ. ಇಲ್ಲಿ ಮೋಸ ಹೋಗಿದ್ದು ಹುಡುಗನಲ್ಲ ಹುಡುಗಿ.

ಜೈಪುರದ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಮಾಡುವ 27 ವರ್ಷದ ಸಂಜಯ್ ಗೆ ಫೇಸ್ಬುಕ್ ನಲ್ಲಿ ಅಪರಿಚಿತ ಹುಡುಗಿಯ ಫ್ರೆಂಡ್ ಶಿಪ್ ರಿಕ್ವೆಸ್ಟ್ ಬಂದಿದೆ. ಹುಡುಗಿ ಮುಖ ನೋಡಿ ಮರುಳಾದ ಸಂಜಯ್ ಫ್ರೆಂಡ್ ಮಾಡಿಕೊಂಡಿದ್ದಾನೆ. ಇಬ್ಬರ ಮಧ್ಯೆ ಮಾತುಕತೆ ಜೋರಾಗಿ ನಡೆದಿದೆ. ಫೇಸ್ಬುಕ್ ಒಂದೇ ಅಲ್ಲ ಹೊರಗೆ ಭೇಟಿಯಾಗಲು ಶುರು ಮಾಡಿದ್ದಾರೆ. ಸಂಬಂಧ ಹೊಟೇಲ್ ರೂಮಿಗೆ ಬಂದು ನಿಂತಿದೆ.

ಸಂಜಯ್ ಜೊತೆ ಒಂದು ರಾತ್ರಿ ಕಳೆದ ಹುಡುಗಿ ಅದು, ಇದು ಕಾರಣ ಹೇಳಿ ಸಂಜಯ್ ನಿಂದ ಸಾಕಷ್ಟು ಹಣ ಪಡೆದಿದ್ದಾಳೆ. ಸಂಜಯ್ ಮದುವೆಗೆ ಒತ್ತಾಯ ಮಾಡಿದ್ರೆ ನೆಪ ಹೇಳಿ ತಪ್ಪಿಸಿಕೊಂಡಿದ್ದಾಳೆ. ಸುಮಾರು 3 ವರ್ಷಗಳ ಕಾಲ ಲೂಟಿ ನಡೆದಿದೆ. ನಂತ್ರ ಸಂಬಂಧಿಕರಿಗೆ ಹೃದಯಾಘಾತವಾಗಿದೆ ಹಣ ಬೇಕೆಂದು ಸಂಜಯ್ ಗೆ ಕರೆ ಮಾಡಿದ ಹುಡುಗಿ 5 ಲಕ್ಷ ಕಿತ್ತುಕೊಂಡಿದ್ದಾಳೆ.

ಸಂಜಯ್ ಹಣ ನೀಡುತ್ತಿದ್ದಂತೆ ಹುಡುಗಿ ನಾಪತ್ತೆಯಾಗಿದ್ದಾಳೆ. ತುಂಬಾ ದಿನಗಳ ನಂತ್ರ ಸಂಜಯ್ ಹುಡುಗಿಯನ್ನು ಪತ್ತೆ ಹಚ್ಚಿದ್ದಾನೆ. ಆದ್ರೆ 25 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಜಯ್ ನಿಂದ ನೆಪ ಹೇಳಿ ಪೀಕಿದ್ದ ಹುಡುಗಿ ಎಲ್ಲ ಮರೆತುಬಿಡು ಅಂತಾ ಹೇಳಿದ್ದಾಳೆ. ಈ ಬಗ್ಗೆ ಹೆಚ್ಚು ತನಿಖೆ ಮಾಡಿದ್ರೆ ಅತ್ಯಾಚಾರದ ದೂರು ದಾಖಲಿಸ್ತೇನೆ ಅಂತಾ ಹೆದರಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...