alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾದ 1 ವರ್ಷದ ಮೇಲೆ ಗೊತ್ತಾಯ್ತು ಅದು ಅವನಲ್ಲ `ಅವಳು’

ಡೆಹ್ರಾಡೂನ್ ನಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಹಿಂದಿನ ವ್ಯಾಲಂಟೈನ್ಸ್ ಡೇಯಂದು ಖುಷಿ ಖುಷಿಯಾಗಿ ಮದುವೆಯಾಗಿದ್ದು ಹುಡುಗನನ್ನಲ್ಲ ಹುಡುಗಿಯನ್ನು ಎಂಬುದು ಪತ್ನಿಗೆ ಗೊತ್ತಾಗಿದೆ. ಈ ವಿಚಾರ ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವರದಕ್ಷಿಣೆ ಆಸೆಗೆ ಯುವತಿಯೊಬ್ಬಳು ಹುಡುಗನ ವೇಷ ಧರಿಸಿ ಯಾಮಾರಿಸಿದ್ದಾಳೆ. ಆಕೆ ವರದಕ್ಷಿಣೆ ಹಣವನ್ನು ತೆಗೆದುಕೊಂಡು ಮನೆಯಿಂದ ಓಡಿ ಹೋದಾಗ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ವಿಚಾರಣೆ ನಡೆಸಿದ ಪೊಲೀಸರು ಹಾಗೂ ಒಂದು ವರ್ಷ ಸಂಸಾರ ಮಾಡಿದ ಪತ್ನಿ ನಿಜ ಸಂಗತಿ ಕೇಳಿ ದಂಗಾಗಿದ್ದಾರೆ.

ಮೂಲತಃ ಉತ್ತರ ಪ್ರದೇಶದ ಹುಡುಗಿ ಗೋರಖ್ಪುರಕ್ಕೆ ಬಂದು ನೆಲೆಸಿದ್ದಳಂತೆ. ಹುಡುಗ್ರಂತೆ ಕೂದಲು ಕತ್ತರಿಸಿಕೊಂಡಿದ್ದ ಹುಡುಗಿ ವರ್ತನೆ ಸಂಪೂರ್ಣವಾಗಿ ಹುಡುಗರನ್ನು ಹೋಲುತ್ತಿತ್ತಂತೆ. ಫೇಸ್ಬುಕ್ ಮೂಲಕ ಡೆಹ್ರಾಡೂನ್ ಚಂದಮಾರಿ ಹುಡುಗಿಯೊಬ್ಬಳನ್ನು ಪ್ರೀತಿಸುವ ನಾಟಕವಾಡಿ ಹಿಂದಿನ ವ್ಯಾಲಂಟೈನ್ಸ್ ಡೇ ಯಂದು ಮದುವೆಯಾಗಿದ್ದಾಳೆ.

ಮದುವೆ ನಂತ್ರ ಪತಿ ಕಿರುಕುಳ ನೀಡ್ತಿದ್ದ. ಈಗ ವರದಕ್ಷಿಣೆ ಹಣ ಕದ್ದು ಓಡಿ ಹೋಗಿದ್ದಾನೆಂದು ಪತ್ನಿ ಠಾಣೆಯಲ್ಲಿ ದೂರು ನೀಡಿದ್ದಳಂತೆ. ವಿಚಾರಣೆ ನಡೆಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ವೇಳೆ ಅದು ಹುಡುಗನಲ್ಲ, ಹುಡುಗಿ ಎಂಬ ಸಂಗತಿ ಗೊತ್ತಾಗಿದೆ.

ಹುಡುಗನ ವೇಷ ಧರಿಸುತ್ತಿದ್ದ ಯುವತಿ ಇನ್ನೂ ಇಬ್ಬರು ಹುಡುಗಿಯರಿಗೆ ಇದೇ ರೀತಿ ಮೋಸ ಮಾಡಿದ್ದಾಳಂತೆ. ಹರಿದ್ವಾರದಲ್ಲಿಯೂ ಹುಡುಗಿಯೊಬ್ಬಳನ್ನು ಮದುವೆಯಾಗಿ ವರದಕ್ಷಿಣೆ ಪಡೆದಿದ್ದಳಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...