alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ವಿರುದ್ಧ ಹೋರಾಟ ಮಾಡ್ತಿದ್ದಾಳೆ ಬಾಲಕಿ, ಕಾರಣ ಗೊತ್ತಾ?

ಇದಿಯಾ ಪಾಲ್ ಎಂಬ 14 ವರ್ಷದ ಬಾಲಕಿ ಕಳೆದ ಮೇನಲ್ಲಿ ಆಧಾರ್ ಬಗ್ಗೆ ಕಾರ್ಟೂನ್ ಒಂದನ್ನು ಬಿಡಿಸಿ ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದ್ಲು. ವರ್ಷದ ಹಿಂದಷ್ಟೆ ಬಾಲಕಿ ಆನುವಂಶಿಕ ಖಾಯಿಲೆಯಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಆಕೆ ಬೆರಳಚ್ಚನ್ನೇ ಕಳೆದುಕೊಳ್ಳಲಿದ್ದಾಳೆ.

ಹಾಗಾಗಿ ಆಧಾರ್ ಕಾರ್ಡ್ ವಿರುದ್ಧ ಇದಿಯಾ ಹೋರಾಟ ಆರಂಭಿಸಿದ್ದಾಳೆ. ತಂದೆ ಅದರೀಶ್ ಪಾಲ್ ಹಾಗೂ ಕುಟುಂಬದ ಸ್ನೇಹಿತರೊಬ್ಬರ ಜೊತೆಗೆ ಸೇರಿ ಇದಿಯಾ ಪ್ರತಿಭಟನೆ ನಡೆಸಿದ್ದಾಳೆ. ಆಧಾರ್ ಕಾರ್ಡ್ ಜನರ ಗೌಪ್ಯತೆಗೆ ಧಕ್ಕೆ ತರುತ್ತದೆ ಎಂಬ ಬ್ಯಾನರ್ ಹಿಡಿದು ಬಾಲಕಿ ಹೋರಾಟ ಮುಂದುವರಿಸಿದ್ದಾಳೆ.

ಇದಿಯಾಗೆ Marfan Syndrome ಎಂಬ ಖಾಯಿಲೆ ಇದೆ. ಇದು ಇಡೀ ದೇಹದ ಮೇಲೂ ಪರಿಣಾಮ ಬೀರಲಿದ್ದು, ಬೆರಳಚ್ಚು ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಆಧಾರ್ ಕಾರ್ಡ್ ಹೊಂದುವುದು ನಿಜಕ್ಕೂ ಸಮಸ್ಯೆ ಆಗಲಿದೆ ಅನ್ನೋದು ಬಾಲಕಿಯ ಅಭಿಪ್ರಾಯ. ವ್ಯಕ್ತಿಯ ಗುರುತು ಕೇವಲ ಒಂದು ಕಾರ್ಡನ್ನು ಆಧರಿಸಿರಬಾರದು ಎನ್ನುತ್ತಾಳೆ ಆಕೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...