alex Certify
ಕನ್ನಡ ದುನಿಯಾ       Mobile App
       

Kannada Duniya

16 ವರ್ಷದ ನಂತ್ರ ಈ ಹುಡುಗಿಗೆ ಗೊತ್ತಾಯ್ತು ಕಠೋರ ಸತ್ಯ

ಐವಿಎಫ್ ಮೂಲಕ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳು ಬೆಳೆದು ದೊಡ್ಡವಳಾಗಿದ್ದಳು. ಮಗಳ ಬೆಳವಣಿಗೆ ನೋಡ್ತಾ ಪಾಲಕರು ಖುಷಿಯಾಗಿದ್ದರು. ಆದ್ರೆ ಒಂದು ದಿನ ಮಗಳಿಗೆ ಪಾಲಕರು ಮುಚ್ಚಿಟ್ಟಿದ್ದ ಕಟು ಸತ್ಯ ಗೊತ್ತಾಯ್ತು.

ಘಟನೆ ವಡೋದರಾದಲ್ಲಿ ನಡೆದಿದೆ. 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಕಣ್ಣಿಗೆ ಮಾರ್ಕ್ಸ್ ಕಾರ್ಡ್ ಹುಡುಕುವ ವೇಳೆ ಆಸ್ಪತ್ರೆ ದಾಖಲೆ ಸಿಕ್ಕಿದೆ. ಸೈನ್ಸ್ ವಿಭಾಗದಲ್ಲಿ ಅಧ್ಯಯನ ಮಾಡ್ತಿದ್ದ ವಿದ್ಯಾರ್ಥಿನಿಗೆ ದಾಖಲೆ ನೋಡಿದ ತಕ್ಷಣ ತಾನು ಐವಿಎಫ್ ಮೂಲಕ ಜನಿಸಿದವಳು ಎಂಬುದು ಗೊತ್ತಾಗಿದೆ.

ಸತ್ಯ ಗೊತ್ತಾಗ್ತಿದ್ದಂತೆ ತನ್ನ ನಿಜವಾದ ತಂದೆ ಹುಡುಕಾಟ ಶುರು ಮಾಡಿದ್ದಾಳೆ ಹುಡುಗಿ. ಈ ಸಂಬಂಧ ತಾಯಿ-ತಂದೆ ಜೊತೆ ಜಗಳ ಶುರು ಮಾಡಿದ್ದಾಳೆ. ನಿಜವಾದ ತಂದೆ ಬಗ್ಗೆ ಮಾಹಿತಿ ನೀಡುವಂತೆ ಪಟ್ಟು ಹಿಡಿದಿದ್ದಾಳೆ. ಮಗಳ ಹಠಕ್ಕೆ ಕಂಗಾಲಾದ ಪಾಲಕರು ಕೌನ್ಸಿಲಿಂಗ್ ಶುರು ಮಾಡಿದ್ದಾರೆ. ಈಗ ವಿದ್ಯಾರ್ಥಿನಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ವಿದ್ಯಾರ್ಥಿನಿ ಮತ್ತೆ ಹಿಂದಿನಂತೆ ಪಾಲಕರನ್ನು ಪ್ರೀತಿ ಮಾಡಲು ಶುರು ಮಾಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...