alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗಿಂತ ಮೊದಲು ವಧುವಿಟ್ಟ ಷರತ್ತು ಕೇಳಿ ನಾಚಿಕೊಂಡ ವರ

ಮದುವೆಗೂ ಮುನ್ನ ವಧು ಬೇಡಿಕೆ ಇಡೋದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ವಧು ಮನೆಗೆ ಶೌಚಾಲಯ ಬೇಕೆಂದು ಧೈರ್ಯವಾಗಿ ಕೇಳ್ತಿದ್ದಾಳೆ. ಆದ್ರೆ ಈ ವಧು, ವರನ ಮುಂದಿಟ್ಟ ಷರತ್ತು ಕೇಳಿ ವರ ನಾಚಿಕೊಂಡಿದ್ದಾನೆ. ಕೊನೆಗೆ ವಧುವಿನ ಎರಡೂ ಷರತ್ತಿಗೆ ಯಸ್ ಎಂದಿದ್ದಾನೆ.

ಬಿಹಾರದ ಪೂರ್ನಿಯಾ ಜಿಲ್ಲೆಯ ಕೈಸರ್ ಹಾಗೂ ಸೋನಿ ಮದುವೆ ನವೆಂಬರ್ 19 ರಂದು ನಡೆಯಲಿದೆ. ಮದುವೆಗೂ ಮುನ್ನ ವಧು, ವರನ ಮುಂದೆ ಎರಡು ಬೇಡಿಕೆಯಿಟ್ಟಿದ್ದಾಳೆ. ಮನೆಯಲ್ಲಿ ಶೌಚಾಲಯ ನಿರ್ಮಾಣವಾಗಬೇಕೆಂದು ಒಂದು ಬೇಡಿಕೆಯಿಟ್ಟ ಸೋನಿ, ಆಹ್ವಾನ ಪತ್ರಿಕೆಯಲ್ಲಿ ಕುಟುಂಬ ಯೋಜನೆ ಸ್ಲೋಗನ್ ಇರಬೇಕು ಎಂದಿದ್ದಾಳೆ.

ಮಂಗಳ ಪತ್ರದಲ್ಲಿ ಕುಟುಂಬ ಯೋಜನೆ ಸ್ಲೋಗನ್ ಜೊತೆ ಸ್ವಚ್ಛತೆ ಬಗ್ಗೆ ಜಾಗೃತಿ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಸ್ಲೋಗನ್ ಇರಬೇಕೆಂದು ಕೇಳಿದ್ದಾಳೆ. ಈ ಎರಡೂ ಷರತ್ತನ್ನು ಖುಷಿಯಾಗಿ ಒಪ್ಪಿಕೊಂಡ ವರ, ಮಂಗಳ ಪತ್ರದ ಮೇಲೆ ಇದನ್ನು ಬರೆಸಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...