alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ನಲ್ಲಿ ಚಾಲಾಕಿ ಕಳ್ಳಿಯ ಕೈಚಳಕ

ಕಳ್ಳರು ಅರೆ ಕ್ಷಣದಲ್ಲಿ ತಮ್ಮ ಕೈಚಳಕ ತೋರ್ತಾರೆ. ಇದಕ್ಕೆ ಈ ಹುಡುಗಿ ಕೂಡ ಹೊರತಾಗಿಲ್ಲ. ಬ್ಯಾಂಕ್ ನಿಂದ ಹಣ ಡ್ರಾ ಮಾಡಿದ್ದ ವ್ಯಕ್ತಿಯೊಬ್ಬನ ಚೀಲಕ್ಕೆ ಬ್ಲೇಡ್ ಹಾಕಿ 40 ಸಾವಿರ ನಗದು ದೋಚಿದ್ದಾಳೆ ಚಾಲಾಕಿ ಕಳ್ಳಿ. ಘಟನೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಹಾಕಿದ್ದ ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಘಟನೆ ಹರ್ಯಾಣದ ಸೋನಿಪತ್ ನಲ್ಲಿ ನಡೆದಿದೆ. ಘಟನೆ ನಡೆದ ತಕ್ಷಣ ಪೊಲೀಸರಿಗೆ ದೂರು ನೀಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ದೂರು ದಾಖಲಿಸಿಕೊಂಡು ಸಿಸಿಟಿವಿ ವಶಕ್ಕೆ ಪಡೆದಿದ್ದಾರೆ. ನರೇಶ್ ಎಂಬಾತನ ಹಣ ಕಳ್ಳತನವಾಗಿದೆ. ಸಿಮೆಂಟ್ ಅಂಗಡಿ ಮಾಲೀಕ ನರೇಶ್ ಪಂಜಾನ್ ನ್ಯಾಷನಲ್ ಬ್ಯಾಂಕ್ ನಿಂದ 40 ಸಾವಿರ ರೂಪಾಯಿ ಡ್ರಾ ಮಾಡಿದ್ದ.

ಹಣ ಪಡೆದ ನಂತ್ರ ಬ್ಯಾಗ್ ನಲ್ಲಿ ಹಣವಿಟ್ಟು ಬ್ಯಾಂಕ್ ನ ಬೇರೆ ಕೆಲಸಕ್ಕಾಗಿ ಇನ್ನೊಂದು ಕೌಂಟರ್ ನಲ್ಲಿ ನಿಂತಿದ್ದ. ಕೆಲಸ ಮುಗಿಸಿ ಬ್ಯಾಗ್ ನೋಡಿದ್ರೆ ಬ್ಯಾಗ್ ನಲ್ಲಿದ್ದ ಹಣ ಕಳ್ಳತನವಾಗಿತ್ತು. ಸಿಸಿಟಿವಿಯಲ್ಲಿ ಹುಡುಗಿ ಬ್ಯಾಗ್ ಕೊರೆದು ಹಣ ಕದ್ದು ಓಡಿರುವ ದೃಶ್ಯ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...