alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿ ನಾಟಕವಾಡಿ 11 ಕೋಟಿ ಲಪಟಾಯಿಸಿದ್ಲು ಖತರ್ನಾಕ್ ಮಹಿಳೆ…!

ಸಾಮಾಜಿಕ ಜಾಲತಾಣದಲ್ಲಿ ಮೋಸ ಹೋಗುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ನಕಲಿ ಫೇಸ್ಬುಕ್ ಅಕೌಂಟ್ ತೆರೆದು ಹುಡುಗ್ರೊಂದೇ ಅಲ್ಲ ಹುಡುಗಿಯರು ಕೂಡ ಮೋಸ ಮಾಡ್ತಿದ್ದಾರೆ. ಇದಕ್ಕೆ ದೆಹಲಿ-ಪಾಟ್ನಾದಲ್ಲಿ ನಡೆದ ಘಟನೆ ಉತ್ತಮ ನಿದರ್ಶನ.

ದೆಹಲಿ ವ್ಯಾಪಾರಿಯೊಬ್ಬನನ್ನು ಪಾಟ್ನಾ ಮಹಿಳೆ ಪ್ರೇಮ ಜಾಲಕ್ಕೆ ಬೀಳಿಸಿದ್ದಾಳೆ. ಎರಡು ವರ್ಷಗಳ ಹಿಂದೆಯೇ ಇಬ್ಬರ ಮಧ್ಯೆ ಫೇಸ್ಬುಕ್ ಮೂಲಕ ಸ್ನೇಹ ಚಿಗುರಿತ್ತು. ವಾಟ್ಸ್ ಅಪ್ ವಿಡಿಯೋ ಕಾಲ್ ಮೂಲಕ ಇಬ್ಬರು ಮಾತನಾಡುತ್ತಿದ್ದರು. ಮೋಸ ಮಾಡ್ತಿದ್ದ ಮಹಿಳೆಗೆ ಮದುವೆ ಕೂಡ ಆಗಿತ್ತು.

ಬೇರೆ ಬೇರೆ ಕಾರಣ ಹೇಳಿ ಮಹಿಳೆ ಬೇರೆ ಬೇರೆ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿದ್ದಳಂತೆ. 2 ವರ್ಷದಲ್ಲಿ ಸುಮಾರು 11 ಕೋಟಿ ಕಬಳಿಸಿದ್ದಾಳೆ. ಹಣ ನೀಡಲು ನಿರಾಕರಿಸಿದ್ರೆ ಫೇಸ್ಬುಕ್ ನಲ್ಲಿ ಧಮಕಿ ಹಾಕಿದ್ದಾಳಂತೆ. ಇದ್ರಿಂದ ಬೇಸತ್ತ ಯುವಕ ದೆಹಲಿ ಪೊಲೀಸರಿಗೆ ದೂರು ನೀಡಿದ್ದ. ಪಾಟ್ನಾ ಪೊಲೀಸರ ಸಹಾಯ ಪಡೆದ ದೆಹಲಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...