alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಡಹಗಲೇ ನಡು ರಸ್ತೆಯಲ್ಲಿ ಮಚ್ಚು ಬೀಸಿ ಬೆಚ್ಚಿ ಬೀಳಿಸಿದ್ಲು ಯುವತಿ

ಕೈನಲ್ಲಿ ಮಚ್ಚು ಹಿಡಿದು ಥೇಟ್ ರೌಡಿಗಳಂತೆ ಆ ಯುವತಿ ಮಚ್ಚು ಬೀಸುತ್ತಿದ್ದರೆ ಅಲ್ಲಿದ್ದ ನಾಗರಿಕರು ಬೆಕ್ಕಸ ಬೆರಗಾಗಿದ್ದರು. ತಡೆಯಲು ಬಂದವರನ್ನೂ ಕೇರ್ ಮಾಡದ ಆ ಯುವತಿ ಮಚ್ಚು ತಿರುಗಿಸುತ್ತಿದ್ದುದ್ದನ್ನು ಕಂಡವರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.

ಇಂತದೊಂದು ಘಟನೆ ಸೂರತ್ ನಲ್ಲಿ ನಡೆದಿದ್ದು, ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದ ವೇಳೆ ಎದುರಾಳಿಗಳನ್ನು ಹಿಮ್ಮೆಟ್ಟಿಸಲು ಯುವತಿ ಮಚ್ಚು ಬೀಸಿದ್ದಾಳೆಂದು ಹೇಳಲಾಗಿದೆ. ಕುಡಿದ ಮತ್ತಿನಲ್ಲಿ ಯುವತಿ ಇಂತಹ ಕೃತ್ಯ ಮಾಡಿದ್ದಾಳೆಯೇ ಎಂಬುದು ತಿಳಿದುಬಂದಿಲ್ಲ.

ಅಲ್ಲಿದವರೊಬ್ಬರು ತಮ್ಮ ಮೊಬೈಲ್ ನಲ್ಲಿ ಯುವತಿಯ ಆಟಾಟೋಪವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಅದೀಗ ವೈರಲ್ ಆಗಿದೆ. ಯುವತಿ ಮತ್ತಾಕೆಯ ಸಂಗಡಿಗನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆಯೇ ಎಂಬುದರ ಮಾಹಿತಿ ತಿಳಿದುಬಂದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...