alex Certify
ಕನ್ನಡ ದುನಿಯಾ       Mobile App
       

Kannada Duniya

ಸೈಕಲ್‌ ಖರೀದಿಸಲು ಕೂಡಿಟ್ಟ ಹಣವನ್ನು ನೆರೆ ಸಂತ್ರಸ್ಥರಿಗೆ ನೀಡಿದ ಬಾಲಕಿ

ಎರ್ನಾಕುಲಂ: ಬೈಸಿಕಲ್‌ ಖರೀದಿಸಲೆಂದು ಕೂಡಿಟ್ಟ ಹಣವನ್ನು 9 ವರ್ಷದ ಬಾಲಕಿ ಕೇರಳದ ನೆರೆ ಸಂತ್ರಸ್ಥರಿಗೆ ನೀಡಿದ್ದಾಳೆ. ಪೋಷಕರು, ಕುಟುಂಬಸ್ಥರು ನೀಡುವ ಹಣವನ್ನೆಲ್ಲ ಡಬ್ಬಕ್ಕೆ ಹಾಕುತ್ತಿದ್ದ ಅನುಪ್ರಿಯಾಗೆ ಬೈಸಿಕಲ್‌ ಎಂದರೆ ಬಹಳ ಪ್ರೀತಿ. ದೊಡ್ಡ ಬೈಸಿಕಲ್‌ ತೆಗೆದುಕೊಳ್ಳಲೆಂದೇ ಆಕೆ ಪ್ರತಿ ಬಾರಿ ಹಣ ಸಿಕ್ಕಾಗೆಲ್ಲ ಡಬ್ಬಕ್ಕೆ ಹಾಕುತ್ತಿದ್ದರು.

ಹೀರೋ ಸೈಕಲ್‌ ಕೊಳ್ಳುವ ಆಸೆ ಇಟ್ಟುಕೊಂಡಿದ್ದ ಅವಳು, ಬರೋಬ್ಬರಿ 9 ಸಾವಿರ ರೂ. ಕೂಡಿಟ್ಟಿದ್ದಳು. ಆದರೆ ಕೇರಳದ ನೆರೆ ಸಂತ್ರಸ್ಥರಿಗೆ ತನ್ನ ಆಸೆಗೆ ಆಸರೆಯಾಗಿದ್ದ ಹಣವನ್ನೆಲ್ಲ ನೀಡಿದ್ದಾಳೆ. ಈ ವಿಚಾರ ಸಾಮಾಜಿಕ ತಾಣಗಳಲ್ಲಿ ಜನಪ್ರಿಯತೆ ಪಡೆದಿದ್ದು, ಅನುಪ್ರಿಯಾಳ ನಿರ್ಧಾರಕ್ಕೆ ಲೈಕ್‌ಗಳ ಸುರಿಮಳೆ ಬಂದಿವೆ. ಟ್ವಿಟರ್‌ನಲ್ಲಿ 1700ಕ್ಕೂ ಅಧಿಕ ಪ್ರತಿಕ್ರಿಯೆಗಳು, 3500ಕ್ಕೂ ಅಧಿಕ ಲೈಕ್‌ಗಳಿಗೆ ಅನುಪ್ರಿಯಾ ಭಾಜನಳಾಗಿದ್ದಾಳೆ.

ಸಂಸ್ಥೆಯಿಂದ ಉಚಿತ ಸೈಕಲ್‌
ಹೀರೋ ಸಂಸ್ಥೆ, ಅನುಪ್ರಿಯಾಳ ನಿರ್ಧಾರಕ್ಕೆ ತಲೆಬಾಗಿದ್ದು, ನಮ್ಮ ಕಡೆಯಿಂದ ನಿಮಗೆ ಹೊಸ ಸೈಕಲ್‌ ನೀಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಟ್ವಿಟರ್‌ನಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತಿದಿನ ಟಿವಿಯಲ್ಲಿ ನೆರೆ, ಪ್ರವಾಹಗಳನ್ನು ಕಾಣುತ್ತಿದ್ದ ಅನುಪ್ರಿಯಾಳಿಗೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನೂ ಸೂಕ್ಷ್ಮವಾಗಿ ಗಮನಿಸಿದ್ದಾಳೆ. ಅಲ್ಲದೆ ಹಣ ಸಂಗ್ರಹಿಸುವ ಬಗ್ಗೆಯೂ ನೋಡಿದ್ದಾಳೆ. ಇದರಿಂದ ಪ್ರೇರಣೆ ಪಡೆದು, ಕೂಡಿಟ್ಟ ಹಣವನ್ನು ನೀಡಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...