alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್‌: ಬಿಸಿ ದಾಲ್‌ನ ಬಾಣಲೆಗೆ ಬಿದ್ದ 5 ವರ್ಷದ ಬಾಲಕಿ ಸಾವು

ಶಾಹಡೋಲ್‌: ಅಂಗನವಾಡಿ ಕೇಂದ್ರದಲ್ಲಿನ 5 ವರ್ಷದ ಬಾಲಕಿಯೊಬ್ಬಳು ಬಿಸಿ ದಾಲ್‌ ಮಾಡುವ ಬಾಣಲೆಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಮಧ್ಯಪ್ರದೇಶದ ಶಾಹಡೋಲ್‌ ಅಂಗನವಾಡಿ ಕೇಂದ್ರದಲ್ಲಿ ಘಟನೆ ನಡೆದಿದ್ದು, ಅಡುಗೆ ಸಹಾಯಕ, ಅಕ್ಕಿ ತೆಗೆದುಕೊಂಡು ಬರಲೆಂದು ಹತ್ತಿರದ ಕೊಠಡಿಗೆ ತೆರಳಿದ ವೇಳೆ, ಬಾಲಕಿ ಬಿಸಿ ದಾಲ್‌ ಇದ್ದ ಬಾಣಲೆಗೆ ಬಿದ್ದಿದ್ದಾಳೆ. ತಕ್ಷಣ ಅವಳನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ, ತೀವ್ರವಾದ ಗಾಯಗಳಿಂದ ಕೊನೆಯುಸಿರೆಳೆದಿದ್ದಾಳೆ. ಘಟನೆ ಸಂಬಂಧ ತನಿಖೆ ನಡೆಸುವುದಾಗಿ ಜಿಲ್ಲಾಧಿಕಾರಿ ಹೇಳಿದ್ದು, ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಕಳೆದ 3 ವರ್ಷಗಳಲ್ಲಿ ದೇಶದಲ್ಲಿ ಒಟ್ಟಾರೆ 889 ಮಂದಿ ವಿದ್ಯಾರ್ಥಿಗಳು ಬಿಸಿಯೂಟದ ಕಾರಣದಿಂದ ಅಸ್ವಸ್ಥರಾಗಿದ್ದಾರೆ ಎಂದು ಸರಕಾರ ರಾಜ್ಯಸಭೆಯಲ್ಲಿನ ಪ್ರಶ್ನೆಯೊಂದಕ್ಕೆ ಉತ್ತರ ನೀಡಿತ್ತು. ಮಕ್ಕಳಿಗೆ ನೀಡಲಾಗುವ ಬಿಸಿಯೂಟ ಯೋಜನೆಯ ವೇಳೆ ಇನ್ನಷ್ಟು ಹೆಚ್ಚು ಜಾಗರೂಕತೆಯ ನಿಯಮಗಳನ್ನು ತೆಗೆದುಕೊಳ್ಳುವುದು ಮುಖ್ಯ ಎಂದು ರಾಜ್ಯಸಭೆಯಲ್ಲಿ ಅಭಿಪ್ರಾಯಪಡಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...