alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಣಕ್ಕೆ ಅಡ್ಡಿಯಾದ ಪತಿಗೆ ತ್ರಿವಳಿ ತಲಾಖ್ ನೀಡಿದ್ದಾಳೆ ಬಾಲಕಿ

talaq

ತ್ರಿವಳಿ ತಲಾಖ್ ವಿವಾದ ದೇಶದಲ್ಲಿ ಚರ್ಚೆಯಲ್ಲಿರುವಾಗ್ಲೇ ಪಶ್ಚಿಮ ಬಂಗಾಳದಲ್ಲಿ 16 ವರ್ಷದ ಬಾಲಕಿಯೊಬ್ಳು ಅಚ್ಚರಿಯ ನಿರ್ಧಾರ ಕೈಗೊಂಡಿದ್ದಾಳೆ. ಓದಿಗೆ ಅಡ್ಡಿಯಾದ ಪತಿಗೆ ತ್ರಿವಳಿ ತಲಾಖ್ ನೀಡಿದ್ದಾಳೆ. ಮುಸ್ಲಿಂ ಸಮುದಾಯದಲ್ಲಿ ಹಲವರು ಬಾಲಕಿಯ ದೃಢ ನಿರ್ಧಾರವನ್ನು ಮೆಚ್ಚಿಕೊಂಡ್ರೆ, ಇನ್ನು ಕೆಲವರು ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾಳೆ ಅಂತಾ ಮೂಗು ಮುರಿದಿದ್ದಾರೆ.

ಆದ್ರೆ ಮಂಪಿ ಖಾತೂನ್ ಎಂಬ ಬಾಲಕಿ ಯಾವ ಟೀಕೆಗಳಿಗೂ ತಲೆಕೆಡಿಸಿಕೊಂಡಿಲ್ಲ. ಮಂಪಿಯನ್ನು 2015ರಲ್ಲೇ ಹೆತ್ತವರು ಸರ್ಜುಲ್ ಘರಮಿ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಆತ ಚಹಾ ಅಂಗಡಿ ಇಟ್ಕೊಂಡಿದ್ದಾನೆ. 9ನೇ ತರಗತಿ ಮುಗಿಸಿರುವ ಮಂಪಿಗೆ ಓದು ಮುಂದುವರಿಸಬೇಕೆಂಬ ಆಸೆ. ಮೊದಲು ಇದಕ್ಕೆ ಗಂಡನ ಮನೆಯವರೂ ಒಪ್ಪಿದ್ದರು.

ಆದ್ರೆ ಬರಬರುತ್ತ ಶಾಲೆಗೆ ಹೋಗದಂತೆ ಒತ್ತಡ ಹೇರಲು ಆರಂಭಿಸಿದ್ದಾರೆ. ಈ ವರ್ಷ ಎಸ್ ಎಸ್ ಎಲ್ ಸಿಯಲ್ಲಿ ಉತ್ತೀರ್ಣಳಾಗಿರೋ ಮಂಪಿ, ಪಿಯುಸಿಗೆ ಪ್ರವೇಶ ಪಡೆಯುವುದಾಗಿ ಹಠ ಹಿಡಿದಿದ್ದಾಳೆ. ಆದ್ರೆ ಪತಿಯ ಮನೆಯವರು ಒಪ್ಪಿಲ್ಲ. ಬೇಸರಗೊಂಡು ತಾಯಿಯ ಮನೆಗೆ ತೆರಳಿದ್ದ ಮಂಪಿ, ಅಲ್ಲೇ ಕಾಲೇಜಿಗೆ ಸೇರಿಕೊಂಡಿದ್ಲು.

ಆದ್ರೆ ಇದನ್ನು ವಿರೋಧಿಸಿದ ಪತಿಯ ಮನೆಯವರು, ಆಕೆಯನ್ನು ವಾಪಸ್ ಕಳಿಸುವಂತೆ ಬೆದರಿಸಲಾರಂಭಿಸಿದ್ದಾರೆ. ಆದ್ರೆ ಇದಕ್ಕೆ ಒಪ್ಪದ ಮಂಪಿ ಧೈರ್ಯವಾಗಿ ಪತಿಯ ಬಳಿ ತೆರಳಿ ಮೂರು ಬಾರಿ ತಲಾಖ್ ಅಂತಾ ಉಚ್ಛರಿಸಿದ್ದಾಳೆ. ಮಂಪಿಯ ದಿಢೀರನೆ ತ್ರಿವಳಿ ತಲಾಖ್ ನೀಡಿದ್ದು ಆಕೆಯ ಪತಿಗೂ ಶಾಕ್ ಕೊಟ್ಟಿತ್ತು. ಆದ್ರೆ ಬೇರಿ ವಿಧಿಯಿಲ್ಲದೆ ಆತ ವಾಪಸ್ಸಾಗಿದ್ದಾನೆ. ಉತ್ತಮ ಶಿಕ್ಷಣದ ಕನಸಿನೊಂದಿಗೆ ಮಂಪಿ ಕಾಲೇಜಿಗೆ ಹೋಗುತ್ತಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...