alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಳ ದಿನಕ್ಕೆ ರೈಲ್ವೆ ಇಲಾಖೆ ಗಿಫ್ಟ್

railaway

ಭಾರತೀಯ ರೈಲ್ವೆ ಇಲಾಖೆ ಪ್ರೇಮಿಗಳಿಗೆ ಹೊಸ ಉಡುಗೊರೆ ನೀಡಿದೆ. ರೈಲ್ವೆ ಭಾರತದ ದರ್ಶನಕ್ಕಾಗಿ 4 ರೈಲ್ವೆ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪ್ಯಾಕೇಜ್ ದೆಹಲಿ ಹಾಗೂ ಚಂಡೀಗಢ್ ನಲ್ಲಿ ಸಿಗಲಿದೆ. ಈ ಪ್ಯಾಕೇಜ್ ನಲ್ಲಿ ದಕ್ಷಿಣ ಭಾರತದ ಕೆಲ ಪ್ರಸಿದ್ಧ ಸ್ಥಳಗಳಿಗೆ ಆದ್ಯತೆ ನೀಡಲಾಗಿದೆ. ಈ ಪ್ಯಾಕೇಜ್ ಬೆಲೆ ಪ್ರತಿ ವ್ಯಕ್ತಿಗೆ 830 ರೂಪಾಯಿ.

ಫೆಬ್ರವರಿ 14ರಿಂದ ದೆಹಲಿಯ ಸಫ್ದರ್ಜಂಗ್ ನಿಂದ ರೈಲು ಪ್ರಯಾಣ ಪ್ರಾರಂಭವಾಗಲಿದೆ. ಪ್ಯಾಕೇಜ್ ನಲ್ಲಿ ಗೋವಾ, ಎರ್ನಾಕುಲಂ, ತಿರುವನಂತಪುರಂ ಪದ್ಮನಾಭ ದೇವಾಲಯ, ಕನ್ಯಾಕುಮಾರಿ, ರಾಮೇಶ್ವರಂ-ರಾಮನಾಥ ದೇವಸ್ಥಾನ ಮತ್ತು ತಿರುಪತಿ ಬಾಲಾಜಿ ಪ್ರಯಾಣ ಸೇರಿಸಲಾಗಿದೆ. ರೈಲು ಮೊರದಾಬಾದ್, ಬರೇಲಿ, ಷಹಜಹಾನ್ಪುರ, ಲಕ್ನೋ, ಕಾನ್ಪುರ, ಝಾನ್ಸಿ, ಬೀನಾ ಮತ್ತು ಭೋಪಾಲ್ ಮಾರ್ಗವಾಗಿ ಚಲಿಸಲಿದೆ.

ದೆಹಲಿಯ ಇನ್ನೊಂದು ಪ್ಯಾಕೇಜ್ ಮಾರ್ಚ್ 16ರಂದು ಶುರುವಾಗಿ 28 ಕ್ಕೆ ಮುಕ್ತಾಯಗೊಳ್ಳಲಿದೆ. ಪ್ಯಾಕೇಜ್ ತಿರುಪತಿ ಬಾಲಾಜಿ, ಕಾಮಾಕ್ಷಿ ದೇವಾಲಯ, ರಾಮೇಶ್ವರಂ, ರಾಮ್ನಾಥ್ ದೇವಾಲಯ, ಮೀನಾಕ್ಷಿ ದೇವಾಲಯ, ಕನ್ಯಾಕುಮಾರಿ, ಮೈಸೂರು ಮತ್ತು ಬೆಂಗಳೂರನ್ನು ಒಳಗೊಂಡಿದೆ.

ಚಂಡೀಗಢ್ ದಿಂದ ಶುರುವಾಗುವ ಮೊದಲ ಪ್ಯಾಕೇಜ್ ಟೂರ್ ಮಾರ್ಚ್ 13 ಕ್ಕೆ ಆರಂಭಗೊಳ್ಳಲಿದೆ.  ತಿರುಪತಿ ಬಾಲಾಜಿ, ಕಾಮಾಕ್ಷಿ ದೇವಾಲಯ, ರಾಮೇಶ್ವರಂ, ರಾಮ್ನಾಥ್ ದೇವಾಲಯ, ಮೀನಾಕ್ಷಿ ದೇವಾಲಯ, ಕನ್ಯಾಕುಮಾರಿ, ಮೈಸೂರು ಮತ್ತು ಬೆಂಗಳೂರನ್ನು ಒಳಗೊಂಡಿದೆ.

ಇನ್ನೊಂದು ಮಾರ್ಚ್ 31ಕ್ಕೆ ಆರಂಭವಾಗಲಿದೆ. ಇದು ಗೋವಾ, ಎರ್ನಾಕುಲಂ, ಪದ್ಮನಾಭ ದೇವಾಲಯ, ಕನ್ಯಾಕುಮಾರಿ, ರಾಮೇಶ್ವರಂ, ತಿರುಪತಿ ಬಾಲಾಜಿ ದೇವಸ್ಥಾನವನ್ನು ಒಳಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...