alex Certify
ಕನ್ನಡ ದುನಿಯಾ       Mobile App
       

Kannada Duniya

ಕುಸಿದು ಬಿದ್ದ ಜಯಂಟ್ ವ್ಹೀಲ್ ಗೆ ಓರ್ವ ಬಲಿ

giant-wheel-collapseಚೆನ್ನೈನಲ್ಲಿನ ಕಿಶ್ಕಿಂತಾ ಥೀಮ್ ಪಾರ್ಕ್ ನಲ್ಲಿನ ಜಯಿಂಟ್ ವ್ಹೀಲ್ ಕುಸಿದು ಬಿದ್ದ ಪರಿಣಾಮ ಸ್ಥಳದಲ್ಲೇ ಒಬ್ಬ ಸಾವನ್ನಪ್ಪಿದ್ದು, ಒಂಭತ್ತು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಕಳೆದ ವರ್ಷದ ನವೆಂಬರ್ ನಲ್ಲಿ ಚೆನ್ನೈನಲ್ಲಿ ಸುರಿದಿದ್ದ ಕುಂಭದ್ರೋಣ ಮಳೆಯಿಂದ ಉಂಟಾದ ಪ್ರವಾಹದ ವೇಳೆ, ಈ ಥೀಮ್ ಪಾರ್ಕ್ ಸಂಪೂರ್ಣ ಜಲಾವೃತಗೊಂಡಿದ್ದ ಕಾರಣ ಅಂದಿನಿಂದಲೂ ಸ್ಥಗಿತಗೊಳಿಸಲಾಗಿತ್ತು.

ಇದನ್ನು ಪುನರಾರಂಭಿಸುವ ಸಲುವಾಗಿ ಸಿದ್ದತೆಗಳು ನಡೆದಿದ್ದು, ಈ ಹಿನ್ನಲೆಯಲ್ಲಿ ಜಯಂಟ್ ವ್ಹೀಲ್ ಅನ್ನು ಪರೀಕ್ಷಾರ್ಥ ಆರಂಭಿಸಲಾಗಿತ್ತು. ಈ ವೇಳೆ ಅದು ಮೂರು ತುಂಡುಗಳಾಗಿ ಕುಸಿದು ಬಿದ್ದಿದ್ದು, ದುರಂತದಲ್ಲಿ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿ, ಇತರೆ ಒಂಭತ್ತು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚೆನ್ನೈನ ತಾಂಬರಮ್ ನಲ್ಲಿರುವ ದೀಪಂ ಆಸ್ಪತ್ರೆಗೆ ದಾಖಲಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...