alex Certify
ಕನ್ನಡ ದುನಿಯಾ       Mobile App
       

Kannada Duniya

ಬಲು ವಿಚಿತ್ರವಾಗಿದೆ ಈ ದೆವ್ವಗಳ ಸ್ಟೋರಿ..!

gwaliar

ಗ್ವಾಲಿಯರ್: ‘ರಾತ್ರಿ ಮನೆಯಲ್ಲಿ ಮಲಗಿದಾಗ, ವಿಚಿತ್ರವಾದ ಶಬ್ಧ ಕೇಳಿ ಬರುತ್ತದೆ. ತಮ್ಮ ಕೋಣೆಗೆ ಬರುವ ದೆವ್ವಗಳು ಮೊಬೈಲ್ ನಲ್ಲಿ ಮಾತನಾಡುತ್ತವೆ’

ಹೀಗೆಂದು ಮಹಿಳೆಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದು, ದೆವ್ವಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾಳೆ. ಗ್ವಾಲಿಯರ್ ನ ಗೈಂಡ್ ವಾಲಿ ಸಡಕ್ ಏರಿಯಾದಲ್ಲಿ ವಾಸವಾಗಿರುವ ಮಮತಾ ಇಂತಹ ವಿಚಿತ್ರವಾದ ದೂರು ನೀಡಿದ ಮಹಿಳೆಯಾಗಿದ್ದಾಳೆ.

ಇಬ್ಬರು ಮಕ್ಕಳ ಜೊತೆಯಲ್ಲಿ ವಾಸವಾಗಿರುವ ಮಮತಾ, ರಾತ್ರಿಯಾದ ನಂತರ ಮನೆಯಲ್ಲಿ ದೆವ್ವಗಳು ಮಾತನಾಡುತ್ತವೆ. ಇದಕ್ಕೆ ನೆರೆಮನೆಯವರೇ ಕಾರಣ ಎಂದು ಆರೋಪಿಸಿದ್ದಾಳೆ.

ನೆರೆಮನೆಯವರು ತಮ್ಮ ಆಸ್ತಿಯನ್ನು ಕಬಳಿಸಲು ದೆವ್ವಗಳನ್ನು ಕಳಿಸಿದ್ದಾರೆ. ಟಿ.ವಿ.ಯಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು ಕೂಡ ನಮ್ಮ ಮನೆಯಲ್ಲಿ ದೆವ್ವಗಳಾಗಿ ಕಾಡುತ್ತವೆ ಎಂದು ಮಮತಾ ದೂರು ನೀಡಿದ್ದು, ತನಿಖೆ ನಡೆಸುವುದಾಗಿ ಡಿ.ಎಸ್.ಪಿ. ಆಲಂ ಖಾನ್ ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...