alex Certify
ಕನ್ನಡ ದುನಿಯಾ       Mobile App
       

Kannada Duniya

ಭೂತವನ್ನೇ ಮಾರಲು ಹೊರಟಿದ್ರು ಈ ಭೂಪರು…!

ಭೂತವನ್ನು ಬಾಟಲಿಯಲ್ಲಿ ಬಂಧಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಲ್ಲಿ ಓರ್ವ ಬರ್ದ್ವಾನ್ ನ ಪೊಲೀಸ್ ವಾಹನದ ಚಾಲಕ.

ತಪಸ್ ರಾಯ್ ಚೌಧರಿ ಎಂಬುವವರಿಗೆ ಸ್ನೇಹಿತನೊಬ್ಬ ಕರೆ ಮಾಡಿದ್ದ. ಬಾಟಲಿಯಲ್ಲಿ ತುಂಬಿಸಿ ಇಟ್ಟಿರುವ ಅಗೋಚರ ಶಕ್ತಿ ಮಾರಾಟಕ್ಕಿದೆ, ಅದು ಎಲ್ಲಾ ಆಸೆಗಳನ್ನು ಈಡೇರಿಸುತ್ತಂತೆ ಅಂತಾ ತಿಳಿಸಿದ್ದ. ಖರೀದಿ ಮಾಡುವ ಆಸಕ್ತಿ ಇದ್ರೆ ಮಾರಾಟಗಾರನನ್ನು ಪರಿಚಯಿಸ್ತೇನೆ ಎಂದಿದ್ದ. ನಂತರ ತಪಸ್ ಈ ವಿಚಾರವನ್ನು ತಮ್ಮ ಸ್ನೇಹಿತ ಬಸುದೇವ್ ಕುಂದು ಜೊತೆ ಚರ್ಚಿಸಿದ್ದ.

ನಂತರ ತಪಸ್ ಮತ್ತವರ ಸ್ನೇಹಿತ ಇಬ್ಬರೂ ಪ್ರೇತವನ್ನು ಮಾರಾಟಕ್ಕಿಟ್ಟಿದ್ದ ವ್ಯಕ್ತಿಯನ್ನು ಸಂಪರ್ಕಿಸಿದ್ರು. ಆ ಪ್ರೇತದ ಬೆಲೆ 10 ಲಕ್ಷ ರೂಪಾಯಿ ಅಂತಾ ಆತ ತಿಳಿಸಿದ್ದ. ಹೋಟೆಲ್ ಒಂದಕ್ಕೆ ಬರಹೇಳಿ ಪೊಲೀಸ್ ಸ್ಟಿಕ್ಕರ್ ಅಂಟಿಸಿದ್ದ ವಾಹನದಲ್ಲಿ ಇವರನ್ನು ಕರೆದೊಯ್ದಿದ್ದ.

1 ರೂಪಾಯಿ ಕಾಯಿನ್ ಇಟ್ಟಿದ್ದ ಚಿಕ್ಕ ಸಾಫ್ಟ್ ಡ್ರಿಂಕ್ ಬಾಟಲಿ ತೋರಿಸಿ ಅದರಲ್ಲೇ ಭೂತವಿದೆ ಅಂತಾ ತಿಳಿಸಿದ್ದ. 10 ಲಕ್ಷ ರೂಪಾಯಿ ಕೊಡುವಂತೆ ಮಾರಾಟಗಾರ ಮತ್ತವನ ಜೊತೆಗಾರರು ಡಿಮ್ಯಾಂಡ್ ಮಾಡಿದ್ದಾರೆ. ಆದ್ರೆ ತಮ್ಮ ಬಳಿ ಹಣವಿಲ್ಲ ಅಂತಾ ತಪಸ್ ಹೇಳಿದ್ರು.

ತಪಸ್ ಮತ್ತವರ ಸ್ನೇಹಿತನ ಬಳಿಯದ್ದ 600 ರೂಪಾಯಿ ಕಿತ್ತುಕೊಂಡು ಅವರನ್ನು ಹೋಟೆಲ್ ಕೋಣೆಯಲ್ಲಿ ಬಂಧಿಸಿಟ್ರು. ವಿಷಯ ತಿಳಿದ ತಪಸ್ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದ. ನಾಲ್ವರನ್ನೂ ಪೊಲೀಸರು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...