alex Certify
ಕನ್ನಡ ದುನಿಯಾ       Mobile App
       

Kannada Duniya

ಆತ ಹೇಳಿದ ಕಥೆ ಕೇಳಿ ಪೊಲೀಸರಿಗೇ ಶಾಕ್….!

ಗಾಜಿಯಾಬಾದ್ ನಲ್ಲಿ 60 ವರ್ಷದ ವ್ಯಕ್ತಿಯೊಬ್ಬ ತಮ್ಮ ಪತ್ನಿ ಹಾಗೂ ಮುದ್ದಿನ ನಾಯಿಯ ಮೃತದೇಹದ ಜೊತೆಗೆ 20 ಗಂಟೆಗಳನ್ನು ಕಳೆದಿದ್ದಾನೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮಧುಸೂಧನ್ ಸಿದ್ಧಾಂತಿ ಎಂಬಾತನ ಪತ್ನಿ 52 ವರ್ಷದ ಕರುಣಾ ಹಾಗೂ 14 ವರ್ಷ ಪ್ರಾಯದ ಲ್ಯಾಬ್ರೆಡಾರ್ ಶ್ವಾನ ಬ್ರೂನೋ ಮೃತರು.

ಬುಧವಾರ ಮಧ್ಯಾಹ್ನ 1 ಗಂಟೆ ವೇಳೆ ಪೊಲೀಸ್ ಠಾಣೆಗೆ ಬಂದ ಮಧುಸೂಧನ್, ತಮ್ಮ ಪತ್ನಿ ಕರುಣಾ ನಾಯಿಯನ್ನು ಕೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಹೇಳಿದ್ದ. ಮಂಗಳವಾರ ಸಂಜೆ 5 ಗಂಟೆ ವೇಳೆಗೆ ಆತ್ಮಹತ್ಯೆಗೆ ಶರಣಾಗಿದ್ಧಾಳೆ ಎಂದಿದ್ದ.

20 ಗಂಟೆಗಳ ಕಾಲ ಶವದ ಜೊತೆಗೆ ಹೇಗಿದ್ದೆ ಅಂತಾ ಪೊಲೀಸರು ಪ್ರಶ್ನಿಸಿದ್ದಾರೆ. ಪತ್ನಿಯ ಸಾವಿನ ಬಳಿಕ ಮಧುಸೂಧನ್ ಗೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನಿಸಿತ್ತಂತೆ. ಕಟ್ಟಡದಿಂದ ಹಾರಬೇಕು ಅಥವಾ ರೈಲ್ವೆ ಹಳಿಗೆ ತಲೆಕೊಟ್ಟು ಸಾಯಬೇಕು ಅಂತಾ ಆತ ಅಂದುಕೊಂಡಿದ್ದ.

ಆದ್ರೆ ಮಧುಸೂಧನ್ ಗೆ ಸಾಯಲು ಧೈರ್ಯ ಬಂದಿರಲಿಲ್ಲ. ಕೆಲದಿನಗಳ ಹಿಂದೆ ಮಧುಸೂಧನ್ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತಂತೆ. ಇದರಿಂದಾಗಿ ಪತಿ-ಪತ್ನಿ ಇಬ್ಬರೂ ನೊಂದಿದ್ದರು. ಮಂಗಳವಾರ ಮಧ್ಯಾಹ್ನ ಮಧುಸೂಧನ್ ಊಟ ಮಾಡಿ ಮಲಗಿದ್ದರು. ಸಂಜೆ 5 ಗಂಟೆಗೆ ಎದ್ದಿದ್ದಾರೆ.

ಅಷ್ಟರಲ್ಲಾಗ್ಲೇ ಕರುಣಾ ನಾಯಿಯನ್ನು ಕೊಂದು ತಾವು ಕೂಡ ಸೀಲಿಂಗ್ ಗೆ ನೇಣು ಬಿಗಿದುಕೊಂಡಿದ್ದರಂತೆ. ಮೃತದೇಹವನ್ನು ಕೆಳಗಿಳಿಸಿದ ಮಧುಸೂಧನ್ ರಾತ್ರಿಯಿಡೀ ಪಕ್ಕದಲ್ಲೇ ಕುಳಿತು, ಜೊತೆಯಾಗಿ ಕಳೆದ 30 ವರ್ಷಗಳನ್ನು ಮೆಲುಕು ಹಾಕಿದ್ದಾನೆ. ಕಣ್ಣೀರಿಟ್ಟಿದ್ದಾನೆ, ತಾನು ಕೂಡ ಸಾಯಬೇಕು ಅಂದುಕೊಂಡ್ರೂ ಧೈರ್ಯ ಬರದೇ ಸುಮ್ಮನಾಗಿದ್ದಾನೆ. ಈ ಘಟನೆ ಬಗ್ಗೆ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...