alex Certify
ಕನ್ನಡ ದುನಿಯಾ       Mobile App
       

Kannada Duniya

ಐ.ಪಿ.ಎಲ್. ಸ್ಟೈಲ್ ನಲ್ಲಿ ನಡೆಯಲಿದೆ ಜಲ್ಲಿಕಟ್ಟು

ಚೆನ್ನೈ: ಪೊಂಗಲ್ ಹಬ್ಬ ಸಮೀಪಿಸುತ್ತಿರುವಂತೆಯೇ, ತಮಿಳುನಾಡಿನಲ್ಲಿ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಆಯೋಜನೆಗೆ ಭರದಿಂದ ಸಿದ್ಧತೆ ನಡೆದಿದೆ.

ನಿರ್ಬಂಧದ ನಡುವೆಯೂ ತಮಿಳುನಾಡಿನ ವಿವಿಧ ಕಡೆಗಳಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಕಳೆದ ಬಾರಿ ಆಯೋಜಿಸಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದರು. ಈಗ ಜಲ್ಲಿಕಟ್ಟು ಕ್ರೀಡೆಗೆ ಹೊಸ ಟಚ್ ನೀಡಲಿದ್ದು, ಐ.ಪಿ.ಎಲ್. ಮಾದರಿಯಲ್ಲಿ ತಂಡಗಳನ್ನು ರಚಿಸಿ ಸ್ಪರ್ಧೆಗಳನ್ನು ಆಯೋಜಿಸಲು ಪ್ಲಾನ್ ಮಾಡಲಾಗಿದೆ.

ಜನವರಿ 7 ರಂದು ಜಲ್ಲಿಕಟ್ಟು ಪ್ರೀಮಿಯರ್ ಲೀಗ್ ಲಾಂಚ್ ಮಾಡಲಾಗ್ತಿದೆ. ತಮಿಳುನಾಡಿನ ದಕ್ಷಿಣ ಭಾಗ, ಮಧುರೈ, ತಿರುಚ್ಚಿ, ಆಲಂಗನಲ್ಲೂರು, ಅವನಿಪುರಂಗಳಲ್ಲಿ ಜಲ್ಲಿಕಟ್ಟು ಉತ್ಸವ ಜೋರಾಗಿ ನಡೆಯುತ್ತದೆ. ಈ ಭಾಗಗಳಲ್ಲಿ ತಂಡಗಳನ್ನು ರಚಿಸಿ ಐ.ಪಿ.ಎಲ್. ಮಾದರಿಯಲ್ಲಿ ಜಲ್ಲಿಕಟ್ಟು ಆಯೋಜಿಸಲಾಗುವುದು.

ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಕ್ರೀಡೆಗೆ ನಿಷೇಧ ಹೇರಿದ್ದು, ತಮಿಳುನಾಡು ವಿಧಾನಸಭೆಯಲ್ಲಿ ಜಲ್ಲಿಕಟ್ಟು ಪರವಾಗಿ ಮಸೂದೆ ಅಂಗೀಕರಿಸಲಾಗಿದೆ. ಹಲವು ನಿಬಂಧನೆಗಳೊಂದಿಗೆ ಜಲ್ಲಿಕಟ್ಟು ಕಳೆದ ಬಾರಿ ನಡೆದಿದ್ದು, ಈ ಬಾರಿ ಹೊಸ ಟಚ್ ನೀಡಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...