alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ತಿಗೆ ಪ್ರೀತಿಯಲ್ಲಿ ಬಿದ್ದ ಪತಿ ಪತ್ನಿಗೆ ನೀಡ್ದ ಇಂಥ ಸಲಹೆ..!

ಪತಿಯೊಬ್ಬ ತನ್ನ ಪತ್ನಿ ಮುಂದೆ ಆಘಾತಕಾರಿ ವಿಷ್ಯವನ್ನು ಹೇಳಿದ್ದಾನೆ.  ನಾನು ಅತ್ತಿಗೆಯನ್ನು ಪ್ರೀತಿಸ್ತೇನೆ. ಹಾಗಾಗಿ ನೀನು ಮೈದುನನನ್ನು ಮದುವೆಯಾಗು. ನಾನು ಅತ್ತಿಗೆಯನ್ನು ಮದುವೆಯಾಗ್ತೇನೆ ಎಂದಿದ್ದಾನೆ. ಪತಿಯಾಡಿದ ಮಾತು ಕೇಳಿ ಪತ್ನಿ ಕಂಗಾಲಾಗಿದ್ದಾಳೆ.

ಘಟನೆ ನಡೆದಿರುವುದು ಉತ್ತರ ಪ್ರದೇಶದ ಬಿಷರತ್ ಗಂಜ್ನ ಅಖಾ ಹಳ್ಳಿಯಲ್ಲಿ. ಲವಿ ಹೆಸರಿನ ಯುವಕನೊಬ್ಬ ಕುಟುಂಬಸ್ಥರ ಒತ್ತಾಯಕ್ಕೆ ಮಣಿದು ಮದುವೆಯಾಗಿದ್ದ. ಆತನಿಗೆ ಪತ್ನಿ ಇಷ್ಟವಿರಲಿಲ್ಲ. ಅತ್ತಿಗೆಯನ್ನು ಪ್ರೀತಿಸ್ತಾ ಇದ್ದ. ಮದುವೆಯಾದ ಮೊದಲ ತಿಂಗಳಲ್ಲೇ ತಮ್ಮನನ್ನು ಮದುವೆಯಾಗು ಎಂದ ಪತಿ ಮಾತು ಕೇಳಿ ಪತ್ನಿ ದಂಗಾಗಿದ್ದಾಳೆ.

ಲವಿ ಬಿಎಸ್ಸಿ ಓದುತ್ತಿದ್ದಾನೆ. ಪತ್ನಿ ಕೋರ್ಟ್ ನಲ್ಲಿ ಕೆಲಸ ಮಾಡ್ತಿದ್ದಾಳೆ. ಅತ್ತಿಗೆ ಪ್ರೀತಿಗೆ ಬಿದ್ದಿರುವ ಲವಿ ಮೊದಲು ಪತ್ನಿಯ ಮನವೊಲಿಸುವ ಯತ್ನ ಮಾಡಿದ್ದಾನೆ. ಆದ್ರೆ ಅಲ್ಲಿ ಯಶ ಕಾಣದ ಕಾರಣ ಹಲ್ಲೆ ನಡೆಸಿದ್ದಾನೆ. ತವರಿಗೆ ಕಳುಹಿಸಿ ಫೋನ್ ನಲ್ಲಿ ಧಮಕಿ ಹಾಕಿದ್ದಾನೆ. ಸದ್ಯ ಪ್ರಕರಣದ ಬಗ್ಗೆ ಸಲಹಾ ಸೆಂಟರ್ ನಲ್ಲಿ ಮಾತುಕತೆ ನಡೆಯುತ್ತಿದೆ. ಸೆಪ್ಟೆಂಬರ್ 9ರಂದು ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...