alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರ ಪ್ರದೇಶದಲ್ಲಿ ಜರ್ಮನ್ ನಾಗರಿಕನ ಮೇಲೆ ಹಲ್ಲೆ

ಉತ್ತರ ಪ್ರದೇಶದ ಸೋನೆಭದ್ರದ ರೈಲ್ವೆ ನಿಲ್ದಾಣದಲ್ಲಿ ಜರ್ಮನ್ ನಾಗರಿಕನೊಬ್ಬನ ಮೇಲೆ ಹಲ್ಲೆ ನಡೆದಿರುವ ಪ್ರಕರಣ ವರದಿಯಾಗಿದೆ. ರೈಲ್ವೆ ಸಿಬ್ಬಂದಿಯೊಬ್ಬ ಬರ್ಲಿನ್ ನಿವಾಸಿ ಹೊಲ್ಗರ್ ಎರಿಕ್ ಎಂಬಾತನಿಗೆ ಹೊಡೆದಿದ್ದಾನೆ ಎನ್ನಲಾಗಿದೆ. ಅಘೋರಿಗಳ ಬಗ್ಗೆ ಸಂಶೋಧನೆ ನಡೆಸಲು ಎರಿಕ್ ಇಲ್ಲಿಗೆ ಬಂದಿದ್ದ ಎನ್ನಲಾಗಿದೆ. ಕೆಲಸ ಮುಗಿಸಿ ವಾಪಸ್ ರೈಲಿಗಾಗಿ ಕಾದಿದ್ದ ವೇಳೆ ಈ ಘಟನೆ ನಡೆದಿದೆ.

ಎರಿಕ್ ಪ್ರಕಾರ ರೈಲ್ವೆ ಸಿಬ್ಬಂದಿ ಅಮನ್ ಕುಮಾರ್ ಮೊದಲು ಎರಿಕ್ ಗೆ ಕಿರುಕುಳ ನೀಡಲು ಶುರುಮಾಡಿದ್ದಾನಂತೆ. ಇದಕ್ಕೆ ಎರಿಕ್ ಪ್ರತಿಕ್ರಿಯೆ ನೀಡದ ಕಾರಣ ಹಲ್ಲೆ ನಡೆಸಿದ್ದಾನಂತೆ. ನಂತ್ರ ಸ್ಥಳೀಯರು ರಕ್ಷಿಸಿದ್ದಾರೆಂದು ಎರಿಕ್ ಹೇಳಿದ್ದಾನೆ. ಆದ್ರೆ ಅಮನ್ ಕುಮಾರ್ ಬೇರೆ ಕಥೆ ಹೇಳುತ್ತಿದ್ದಾರೆ. ವೆಲ್ ಕಮ್ ಟು ಇಂಡಿಯಾ ಎಂದು ಎರಿಕ್ ನೋಡಿ ಹೇಳಿದೆ. ಆದ್ರೆ ಆತ ಹಿಂತಿರುಗಿ ನನಗೆ ಗುದ್ದಿದ್ದಾನೆ. ನಂತ್ರ ಗಲಾಟೆ ಶುರುವಾಗಿದೆ ಎಂದು ಅಮನ್ ಕುಮಾರ್ ಹೇಳಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಎರಿಕ್ ವೈದ್ಯಕೀಯ ಪರೀಕ್ಷೆ ನಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...