alex Certify
ಕನ್ನಡ ದುನಿಯಾ       Mobile App
       

Kannada Duniya

ಗೀತಾ ತಮ್ಮ ಮಗಳೆಂದ ಚಂಡೀಗಢ ದಂಪತಿ

2015 ರಲ್ಲಿ ಪಾಕಿಸ್ತಾನದಿಂದ ವಾಪಸ್ಸಾದ ಭಾರತದ ಹುಡುಗಿ ಗೀತಾ ತಮ್ಮ ಮಗಳೆಂದು ಚಂಡೀಗಢದ ದಂಪತಿ ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ.

ಕಿವುಡ ಹಾಗೂ ಮೂಕ ಹುಡುಗಿ ಗೀತಾ ತಮ್ಮ ಮಗಳೆಂದು ಚಂಡೀಗಢದ ರಾಜ್ ಕುಮಾರ್ ದಂಪತಿ ಹೇಳುತ್ತಿದ್ದಾರೆ. ಈ ಕುರಿತು ಆ್ಯಂಟಿ ಹ್ಯೂಮನ್ ಟ್ರಾಫಿಕ್ ಯುನಿಟ್ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಅವರು ಇಂದೋರ್ ಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

ತಮ್ಮ ಮಗಳು ಬಬಿತಾ 2005 ರಲ್ಲಿ 8 ವರ್ಷದವಳಿದ್ದಾಗ ಸಂಜಯ್ ಕಾಲೋನಿ ಎಂಬಲ್ಲಿಂದ ಕಾಣೆಯಾಗಿದ್ದಳು. ಈ ಬಗ್ಗೆ ಪೊಲೀಸ್ ಕಂಪ್ಲೇಂಟ್ ಕೂಡ ನೀಡಲಾಗಿದೆ. ಇದಾದ ಬಳಿಕ ಗೀತಾಳ ಪೋಟೋ ಪತ್ರಿಕೆಗಳಲ್ಲಿ ಬಂದ ಬಳಿಕ ಆಕೆಯ ಹಳೆಯ ಭಾವಚಿತ್ರವನ್ನು ಹೋಲಿಸಿದಾಗಲೇ ತಮಗೆ ಗೊತ್ತಾಗಿದ್ದು, ಎಂದು ರಾಜ್ ದಂಪತಿ ಹೇಳಿದ್ದಾರೆ.

ಇನ್ನು ಗೀತಾ ಜೊತೆ ತಂದೆ ಎಂದು ಹೇಳಿಕೊಂಡಿರುವ ರಾಜ್ ಕುಮಾರ್ ಭೇಟಿ ಮಾಡಿಸುವುದಾಗಿ ಹಾಗೂ ಅವರಿಬ್ಬರ ಡಿಎನ್ಎ ಪರೀಕ್ಷಿಸುವುದಾಗಿ ಚಂಡೀಗಢ ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...