alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾದ ಸಲಿಂಗಕಾಮಿ ಹುಡುಗಿಯರು

married

ಸಲಿಂಗಕಾಮಿಗಳ ಮದುವೆಗೆ ಫರಿದಾಬಾದ್ ಸಾಕ್ಷಿಯಾಗಿದೆ. ಇಲ್ಲಿನ ಮೌಂಟೇನ್ ಕಾಲೋನಿಯಲ್ಲಿ ನೆಲೆಸಿರುವ ಪಾಲಿಟೆಕ್ನಿಕ್ ವಿದ್ಯಾರ್ಥಿನಿ, ಆಗ್ರಾದ ಕಾಸ್ಮೆಟಿಕ್ ಶಾಪ್ ನಲ್ಲಿ ಕೆಲಸ ಮಾಡುವ ಹುಡುಗಿ ಜೊತೆ ಮದುವೆಯಾಗಿದ್ದಾಳೆ. ವಿದ್ಯಾರ್ಥಿನಿ ಕೆಲ ದಿನಗಳ ಹಿಂದೆ ಪಾಲಕರಿಗೆ ತಿಳಿಸದೆ ಆಗ್ರಾಕ್ಕೆ ಹೋಗಿದ್ದಳಂತೆ. ಅಲ್ಲಿ ಸ್ನೇಹಿತೆ ಜೊತೆ ಮದುವೆಯಾಗಿದ್ದಾಳೆ. ನಂತ್ರ ಫರಿದಾಬಾದ್ ಗೆ ಬಂದ ಹುಡುಗಿಯರು ಎಸ್ಡಿಎಂಗೆ ತಮ್ಮ ಮದುವೆ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಮೂಲಗಳ ಪ್ರಕಾರ ಇಬ್ಬರು ದೂರದ ಸಂಬಂಧಿಗಳು ಎನ್ನಲಾಗ್ತಾ ಇದೆ.

ಎಸ್ಡಿಎಂ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸಲಿಂಗಕಾಮಿ ಮದುವೆ ಕುರಿತ ಕಾನೂನು ನಮ್ಮಲ್ಲಿಲ್ಲ. ಆದ್ರೆ ಇಬ್ಬರೂ ವಯಸ್ಕರಾಗಿರುವುದರಿಂದ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ದಿನ ಫರಿದಾಬಾದ್ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆಂದು ಆಕೆ ತಂದೆ ದೂರು ನೀಡಿದ್ದರು. ನಂತ್ರ ಮಗಳು ಸಲಿಂಗಕಾಮಿ ಎಂಬುದು ತಿಳಿದು ಅವರು ಕುಸಿದು ಬಿದ್ದಿದ್ದರು. ವಿದ್ಯಾರ್ಥಿನಿಯನ್ನು ಮನೋವೈದ್ಯರ ಬಳಿ ಕರೆದೊಯ್ಯಲಾಗಿತ್ತಂತೆ. ಆಕೆಯನ್ನು ಸರಿಪಡಿಸುವುದಾಗಿ ವೈದ್ಯರು ಹೇಳಿದ್ದರಂತೆ. ಆದ್ರೆ ಆಗ್ರಾ ಹುಡುಗಿ ಮುಂದೆ ವೈದ್ಯರು ಕೈಚೆಲ್ಲಿ ಕುಳಿತಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...