alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದ ಅತಿ ವೇಗದ ರೈಲಿನ ವಿಶೇಷತೆಗಳೇನು ಗೊತ್ತಾ..?

gatiman

ದೇಶದಲ್ಲಿ ಬುಲೆಟ್ ಟ್ರೈನ್ ಸಂಚಾರದ ಬಗ್ಗೆ ಮಾತು ಕೇಳಿಬರುತ್ತಿದ್ದು, ಇದಕ್ಕೆ ಪೂರಕ ಎನ್ನುವಂತೆ ಮೊದಲ ಹೈಸ್ಪೀಡ್ ರೈಲು ನಾಳೆ ಲೋಕಾರ್ಪಣೆಗೊಳ್ಳಲಿದೆ. ರೈಲ್ವೇ ಸಚಿವ ಸುರೇಶ್ ಪ್ರಭು, ಏಪ್ರಿಲ್ 5 ರಂದು ಭಾರತದ ಅತಿವೇಗದ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.

ಗತಿಮಾನ್ ಎಕ್ಸ್ ಪ್ರೆಸ್ ಹೆಸರಿನ ಈ ರೈಲು ಗಂಟೆಗೆ 160 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಲಿದೆ. ದೇಶದ ಮೊದಲ ಹೈ ಸ್ಪೀಡ್ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನವದೆಹಲಿಯಿಂದ ಆಗ್ರಾವರೆಗಿನ 210 ಕಿಲೋ ಮೀಟರ್ ಪ್ರಯಾಣ ಕೇವಲ 100 ನಿಮಿಷದಲ್ಲಿ ಮುಗಿಯುತ್ತದೆ. 12 ಎಸಿ ಕಂಪಾರ್ಟ್ ಮೆಂಟ್ ಗಳನ್ನು ಹೊಂದಿದ್ದು, ಉಚಿತ ವೈಫೈ, ಆಟೋ ಮ್ಯಾಟಿಕ್ ಡೋರ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ಬೆಳಿಗ್ಗೆ 8.10 ಕ್ಕೆ ದೆಹಲಿಯ ನಿಜಾಮುದ್ದೀನ್ ನಿಲ್ದಾಣದಿಂದ ಹೊರಟು, 9.50 ಕ್ಕೆ ಆಗ್ರಾ ತಲುಪಲಿದೆ. ವಾರದ 6 ದಿನಗಳ ಕಾಲ ಗತಿಮಾನ್ ಎಕ್ಸ್ ಪ್ರೆಸ್ ರೈಲು ಸಂಚರಿಸಲಿದ್ದು, ಶುಕ್ರವಾರ ತಾಜ್ ಮಹಲ್ ಕ್ಲೋಸ್ ಆಗುವುದರಿಂದ ಅಂದು ರೈಲು ಸಂಚಾರ ಇರುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...