alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್.ಪಿ.ಜಿ. ಗ್ರಾಹಕರಿಗೊಂದು ಶಾಕಿಂಗ್ ನ್ಯೂಸ್ !

lpg gas pricing to

ಎಲ್.ಪಿ.ಜಿ. ಗ್ರಾಹಕರ ಮೇಲೆ ಈಗ ಕೇಂದ್ರ ಸರ್ಕಾರದ ಕಣ್ಣುಬಿದ್ದಿದೆ. ವಾರ್ಷಿಕವಾಗಿ 10 ಲಕ್ಷ ರೂ.ಗಳಿಗಿಂತ ಹೆಚ್ಚಿನ ಆದಾಯ ಹೊಂದಿರುವವರ ಗ್ಯಾಸ್ ಸಬ್ಸಿಡಿ ಕಡಿತಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಹಾಗಾಗಿ ಗ್ರಾಹಕರು ತಮ್ಮ ಆದಾಯದ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕಿದೆ.

ಗಿವ್ ಇಟ್ ಅಪ್(ಸ್ವ ಇಚ್ಛೆಯಿಂದ ಸಬ್ಸಿಡಿ ಬಿಡಿ) ಕರೆಗೆ ಹೆಚ್ಚಿನ ಜನ ಸ್ಪಂದಿಸಲಿಲ್ಲ. ಬಹುತೇಕರು ಸಬ್ಸಿಡಿ ತೊರೆಯದ ಕಾರಣ ಹಿನ್ನಡೆಯಾದಂತಾಗಿದೆ. ಸಬ್ಸಿಡಿ ಕುರಿತಂತೆ ಕೇಂದ್ರ ಸರ್ಕಾರ ಹೊಸ ಕ್ರಮಕ್ಕೆ ಮುಂದಾಗಿದ್ದು, ಇದರಂತೆ ಗ್ಯಾಸ್ ವಿತರಕರ ಬಳಿ ನಿಗದಿತ ಅರ್ಜಿಗಳನ್ನು ಪಡೆದು ಗ್ರಾಹಕರು ತಮ್ಮ ಆದಾಯದ ವಿವರವನ್ನು ನೀಡಬೇಕಿದೆ. ವಿತರಕರಿಂದ ಈ ಅರ್ಜಿಗಳನ್ನು ತೈಲ ಕಂಪನಿಗಳು ಪಡೆದುಕೊಳ್ಳಲಿದ್ದು, ಬಳಿಕ 10 ಲಕ್ಷ ರೂ.ಗಳಿಗಿಂತ ಹೆಚ್ಚಿನ ಆದಾಯ ಇರುವವರ ಗ್ಯಾಸ್ ಸಬ್ಸಿಡಿ ಕಡಿತ ಮಾಡಲಾಗುವುದು ಎಂದು ಹೇಳಲಾಗಿದೆ.

ಕೇಂದ್ರ ಸರ್ಕಾರ 10 ಲಕ್ಷ ರೂ. ಗಳಿಗಿಂತ ಹೆಚ್ಚಿನ ಆದಾಯ ಹೊಂದಿರುವವರ ಗ್ಯಾಸ್ ಸಬ್ಸಿಡಿ ಕಡಿಮೆ ಮಾಡಲು ತೀರ್ಮಾನಿಸಿದ್ದು, ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ. ಕಳೆದ ವರ್ಷ ಗಿವ್ ಇಟ್ ಅಪ್ ಕರೆಗೆ ನಿರೀಕ್ಷಿತ ಬೆಂಬಲ ವ್ಯಕ್ತವಾಗದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಕೇಂದ್ರ ಮುಂದಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...