alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾರಿ ಗಾರ್ಬಾ ಡಾನ್ಸ್ ಗೆ ಸಾಲ್ಸಾ ಟ್ವಿಸ್ಟ್

ಗುಜರಾತ್ ಕ್ಯಾಲೆಂಡರ್ ನಲ್ಲಿ ನವರಾತ್ರಿ ಉತ್ಸವ ಪ್ರತಿವರ್ಷದ ವಾರ್ಷಿಕ ಕಾರ್ಯಕ್ರಮಗಳಲ್ಲಿ ಒಂದು. ಇಲ್ಲಿನ ಜನರು ನವರಾತ್ರಿಯನ್ನು ವಿಶೇಷವಾಗಿ ಆಚರಿಸ್ತಾರೆ. ನವರಾತ್ರಿ ಎಂದ್ರೆ ಗಾರ್ಬಾ, ಗಾರ್ಬಾ ಅಂದ್ರೆ ನವರಾತ್ರಿ ಎಂಬುದು ಇಲ್ಲಿನವರ ನಂಬಿಕೆ.

ಪ್ರತಿ ವರ್ಷವೂ ಗಾರ್ಬಾದಲ್ಲಿ ಹೊಸ ಪ್ರಯೋಗಗಳನ್ನು ಮಾಡಿ ಜನರಿಗೆ ಮನರಂಜನೆ ನೀಡುವ ಪ್ರಯತ್ನ ಮಾಡ್ತಾರೆ. ಈ ಬಾರಿ ಕೂಡ ಗಾರ್ಬಾ ವಿಶೇಷತೆ ಹೊಂದಿದೆ. ಈ ಬಾರಿ ಗಾರ್ಬಾಕ್ಕೆ ಸಾಲ್ಸಾ ಸೇರ್ಪಡೆಯಾಗಿದೆ. ಈ ವಿಶೇಷ ನೃತ್ಯಕ್ಕೆ ಸಾಲ್ಸಾಗಾರ್ಬಾ ಎಂದು ಹೆಸರಿಡಲಾಗಿದೆ.

ಸಾಲ್ಸಾ ಗಾರ್ಬಾ ಜೋಡಿಗಳು ಮಾಡುವ ನೃತ್ಯ. ಸದ್ಯ ಇದ್ರ ತರಬೇತಿ ದೃಶ್ಯಗಳು ವೈರಲ್ ಆಗಿವೆ. ರಾಜ್ಯದ ವಿವಿಧ ಭಾಗಗಳಲ್ಲಿ ಸಾಲ್ಸಾಗಾರ್ಬಾ ನೃತ್ಯದ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಮೂರು ದಿನದ ಶಿಬಿರ ನಡೆಯುತ್ತಿದೆ. ಈ ಬಾರಿ 22 ಸ್ಟೆಪ್ಸ್ ಬದಲು 33 ಸ್ಟೆಪ್ಸ್ ಹೇಳಿಕೊಡಲಾಗುತ್ತಿದೆ.

ಸಾಲ್ಸಾಗಾರ್ಬಾ ಡಾನ್ಸ್ ತರಬೇತಿ ಕಳೆದ ಎರಡು ತಿಂಗಳಿಂದ ನಡೆಯುತ್ತಿದೆ. ಈಗಾಗಲೇ 60 ಜೋಡಿ ಅಹಮದಾಬಾದ್ ನ ಎಸ್ ಪಿ ಸ್ಟೇಡಿಯಂನಲ್ಲಿರುವ ಡಾನ್ಸ್ ಸ್ಟುಡಿಯೋದಲ್ಲಿ ತರಬೇತಿ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...