alex Certify
ಕನ್ನಡ ದುನಿಯಾ       Mobile App
       

Kannada Duniya

‘ಗಾಂಧಿ ಚಿಂತನೆ’ ಪರೀಕ್ಷೆಯಲ್ಲಿ ಕೊಲೆ ಆರೋಪಿ ಪ್ರಥಮ

ಕೊಲೆ ಮಾಡಿದ ಆರೋಪದಡಿ ಶಿಕ್ಷೆ ಅನುಭವಿಸುತ್ತಿರುವ ಗ್ಯಾಂಗ್ ಸ್ಟಾರ್ ಅರುಣ್ ಗಾವ್ಳಿ, `ಗಾಂಧಿ ಚಿಂತನೆ’ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ.

ನಾಗ್ಪುರ ಕೇಂದ್ರ ಕಾರಾಗೃಹದ ಕೈದಿ ಅರುಣ್, ಮಹಾತ್ಮ ಗಾಂಧಿಯವರ ಆದರ್ಶಗಳ ಪರಿಕಲ್ಪನೆ ಎಂಬ ಪರೀಕ್ಷೆಯಲ್ಲಿ 80 ಅಂಕಗಳಿಗೆ 74 ಅಂಕಗಳನ್ನು ಪಡೆದಿದ್ದಾರೆ. ಈ ಪರೀಕ್ಷೆಯನ್ನು ಸುಮಾರು 160 ಕೈದಿಗಳು ಬರೆದಿದ್ದು, ಅರುಣ್ ಗಾವ್ಳಿ ಮೊದಲಿಗರಾಗಿ ತೇರ್ಗಡೆಯಾಗಿದ್ದಾರೆ. ಅಕ್ಟೋಬರ್ 2017 ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಕಳೆದ ವಾರ ಬಿಡುಗಡೆಯಾಗಿದೆ.

ಆಸಕ್ತ ಕೈದಿಗಳು ಈ ಪರೀಕ್ಷೆ ಬರೆಯಬಹುದಿತ್ತು. ಪರೀಕ್ಷೆಯಲ್ಲಿ ಕೈದಿಗಳಿಗೆ 80 ವಸ್ತುನಿಷ್ಠ ಪ್ರಶ್ನೆಗಳನ್ನು ನೀಡಲಾಗಿತ್ತು ಎಂದು ತಿಳಿದು ಬಂದಿದೆ. ಪರೀಕ್ಷೆಯಲ್ಲಿ ಪಾಸಾದ ಕೈದಿಗಳಿಗೆ ಖಾದಿ ವಸ್ತ್ರ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಶಿವಸೇನೆಯ ಪಾಲಿಕೆಯ ಸದಸ್ಯ ಕಮಲಾಕರ್ ರನ್ನು ಕೊಲೆ ಮಾಡಿದ ಆರೋಪದಡಿ ಅರುಣ್ ಗಾವ್ಳಿ 2007 ರಲ್ಲಿ ಜೈಲು ಸೇರಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...