alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿನಿ ಸಾವನ್ನಪ್ಪಿದ ನಂತರವೂ ಗ್ಯಾಂಗ್ ರೇಪ್

rape

ಈ ವಿಶ್ವದಲ್ಲಿ ಮನುಷ್ಯನಿಗಿಂತ ಅಪಾಯಕಾರಿ ಯಾರೂ ಇಲ್ಲ. ಈ ಮಾತಿಗೆ ಪುಷ್ಠಿ ನೀಡುವಂತೆ ಪದೇ ಪದೇ ಆಘಾತಕ್ಕೊಳಗಾಗುವ ಘಟನೆಗಳು ನಡೆಯುತ್ತಲೇ ಇವೆ. ಇಂತಹದ್ದೇ ಒಂದು ಘಟನೆ ಲಕ್ನೋದಲ್ಲಿ ನಡೆದಿದೆ. ಶಾಲೆಗೆಂದು ಹೋಗಿದ್ದ ವಿದ್ಯಾರ್ಥಿನಿ ಶಾಲೆಗೆ ಹೋಗಲಿಲ್ಲ, ಮನೆಗೂ ವಾಪಸ್ ಬರಲಿಲ್ಲ. ಅನೇಕ ದಿನಗಳ ನಂತರ ಆಕೆಯ ಮೃತದೇಹ ಸಿಕ್ಕಿದೆ. ಶವಪರೀಕ್ಷೆ ನಡೆಸಿದ ವೈದ್ಯರೇ ದಂಗಾಗಿದ್ದಾರೆ. ಶವದ ಜೊತೆಯೂ ರೇಪ್ ಮಾಡಿದ್ದಾರಂತೆ ಕಾಮುಕರು.

ಲಕ್ನೋದ ಮುಖ್ಯಮಂತ್ರಿ ಮನೆ ಬಳಿಯೇ ಶವ ಸಿಕ್ಕಾಗ ಪೊಲೀಸ್ ಸೇರಿದಂತೆ ಎಲ್ಲರೂ ಆತಂಕಕ್ಕೊಳಗಾಗಿದ್ದರು. ಆದ್ರೆ ಶವ ಪರೀಕ್ಷೆ ಮತ್ತಷ್ಟು ಭಯಾನಕತೆಯನ್ನು ತೆರೆದಿಟ್ಟಿದೆ. ಸಾವನ್ನಪ್ಪಿದ ನಂತರವೂ ನಾಲ್ವರು ಕಾಮುಕರು ಅತ್ಯಾಚಾರ ನಡೆಸಿದ್ದಾರೆ. ಘಟನೆ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಅದರಲ್ಲಿ ಇಬ್ಬರು ಆಟೋ ಚಾಲಕರಾಗಿದ್ದಾರೆ. ಒಬ್ಬನ ಬಳಿ ವಿದ್ಯಾರ್ಥಿನಿ ಮೊಬೈಲ್ ಹಾಗೂ ಇನ್ನೊಬ್ಬನ ಬಳಿ ಬ್ಲೇಜರ್ ಸಿಕ್ಕಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಫೆಬ್ರವರಿ 10 ರಂದು ನಾಪತ್ತೆಯಾಗಿದ್ದಳು. ಆಕೆ ಶವ 4 ದಿನಗಳ ನಂತರ ಮುಖ್ಯಮಂತ್ರಿ ಮನೆ ಬಳಿ ಸಿಕ್ಕಿತ್ತು. ಈಗ ಶವ ಪರೀಕ್ಷೆ ವರದಿ ಬಂದಿದ್ದು, ಅದ್ರಲ್ಲಿ ಗ್ಯಾಂಗ್ ರೇಪ್ ನಡೆದಿರುವುದು ಸ್ಪಷ್ಟವಾಗಿದೆ. ಗ್ಯಾಂಗ್ ರೇಪ್ ನಂತರ ಕಾಮುಕರು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಆಕೆ ಸಾವನ್ನಪ್ಪಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...