alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಗಣಪತಿಗೆ ಮಾಡಿಸಿರುವ ವಿಮೆಯ ಮೊತ್ತ ಕೇಳಿದ್ರೆ ಬೆರಗಾಗ್ತೀರಾ…!

ಮುಂಬೈ: ಗಣಪತಿ ಹಬ್ಬದಲ್ಲಿ ನಾನಾ ಭಂಗಿಯಲ್ಲಿರುವ, ವಿಶೇಷ ಗಣಪತಿಗಳನ್ನು ಕೂರಿಸುವುದು ರೂಢಿಯಲ್ಲಿದೆ. ಅದೇ ರೀತಿ ದುಬಾರಿ ಗಣೇಶನ ಬಗ್ಗೆಯೂ ಸಾಮಾನ್ಯವಾಗಿ ಕೇಳಿರುತ್ತೀರಿ.

ಮುಂಬೈನಲ್ಲಿ ದುಬಾರಿ ಗಣೇಶನನ್ನು ಕೂರಿಸುವುದು ವಾಡಿಕೆ. ಗಣಪತಿ ಮಂಡಲಗಳು ಒಂದಕ್ಕಿಂತ ಒಂದು ಅದ್ಧೂರಿಯಾಗಿ ಗಣೇಶೋತ್ಸವವನ್ನು ಆಚರಿಸುತ್ತವೆ. ಈ ಮಂಡಲಗಳು ಈ ಬಾರಿ ಒಟ್ಟು 600 ಕೋಟಿ ರೂಪಾಯಿಗಳಷ್ಟು ವಿಮೆ ಮಾಡಿಸಿದ್ದು, ಕಳೆದ ವರ್ಷಕ್ಕಿಂತ ಶೇ.20 ರಷ್ಟು ಮೊತ್ತ ಹೆಚ್ಚಳವಾಗಿದೆ.

ಇವುಗಳಲ್ಲಿ ಬರೋಬ್ಬರಿ 264.75 ಕೋಟಿ ರೂಪಾಯಿ ವಿಮೆ ಹೊಂದಿರುವ ಗಣೇಶ ಮಂಡಲ ಗಮನ ಸೆಳೆಯುವಂತಿದೆ. ಮುಂಬೈನ ಕಿಂಗ್ಸ್ ಸರ್ಕಲ್ ನಲ್ಲಿ ಜಿ.ಎಸ್.ಬಿ. ಸೇವಾ ಮಂಡಲದಿಂದ ಪ್ರತಿಷ್ಠಾಪಿಸುವ ಗಣೇಶನಿಗೆ 264.75 ಕೋಟಿ ರೂ. ವಿಮೆ ಮಾಡಿಸಲಾಗಿದೆ.

90 ಕೆ.ಜಿ. ಚಿನ್ನದೊಂದಿಗೆ ಅಲಂಕೃತನಾಗುವ ಬೃಹತ್ ಗಣೇಶನನ್ನು ಬೆಳ್ಳಿಯಲ್ಲಿ ನಿರ್ಮಿಸಿರುವ ಮಂಟಪದಲ್ಲಿ ಕೂರಿಸಲಾಗುತ್ತದೆ. ಇದು ದುಬಾರಿ ವಿಮೆ ಹೊಂದಿರುವ ಗಣಪತಿಯಾಗಿದ್ದು, ವೀಕ್ಷಣೆಗೆ ಹೆಚ್ಚಿನ ಜನ ಆಗಮಿಸುತ್ತಾರೆ. ಇನ್ನು ಮುಂಬೈನ ಮತ್ತೊಂದು ಪ್ರಮುಖ ಮಂಡಲವಾಗಿರುವ ಲಾಲ್ ಬಗೀಚಾ ಗಣಪತಿಗೆ 25 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಮುಂಬೈ ಗಣಪತಿ ಮಂಡಲಗಳು ಈ ಬಾರಿ ಒಟ್ಟು 600 ಕೋಟಿ ರೂಪಾಯಿ ವಿಮೆ ಮಾಡಿಸಿವೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...