alex Certify
ಕನ್ನಡ ದುನಿಯಾ       Mobile App
       

Kannada Duniya

ಈ ರೈಲು ನಿಲ್ದಾಣದಲ್ಲಿನ್ನು ಮಹಿಳೆಯರದ್ದೇ ಕಾರುಬಾರು…!

ದೇಶದಲ್ಲಿ ಇದೇ ಮೊದಲ ಬಾರಿಗೆ ಮುಖ್ಯ ರೈಲು ನಿಲ್ದಾಣವೊಂದನ್ನು ಪೂರ್ಣವಾಗಿ ಮಹಿಳೆಯರೇ ನಿಭಾಯಿಸಲಿದ್ದಾರೆ. ರಾಜಸ್ಥಾನದ ಜೈಪುರದಲ್ಲಿರುವ ಗಾಂಧಿನಗರ ರೈಲು ನಿಲ್ದಾಣ ಈಗ ಸಂಪೂರ್ಣ ಮಹಿಳಾಮಯವಾಗಿದೆ.

ರೈಲು ಹಳಿ ಬದಲಾಯಿಸುವುದರಿಂದ ಹಿಡಿದು ಟಿಕೇಟ್ ಪರಿಶೀಲಿಸುವವರೆಗೂ ಎಲ್ಲರೂ ಮಹಿಳಾ ಸಿಬ್ಬಂದಿಯಾಗಿದ್ದಾರೆ. ಈ ನಿಲ್ದಾಣದಲ್ಲಿ ಒಟ್ಟು 40 ಮಂದಿ ಮಹಿಳಾ ಸಿಬ್ಬಂದಿಗಳಿದ್ದು, ರೈಲ್ವೆ ಸುರಕ್ಷಾ ದಳವೂ ಸಹ ಮಹಿಳೆಯರಿಂದ ಕೂಡಿರುವುದು ವಿಶೇಷ.

ಜೈಪುರ-ದೆಹಲಿ ಮಾರ್ಗದ ಈ ನಿಲ್ದಾಣದ ಮೂಲಕ ಪ್ರತಿನಿತ್ಯ 50 ರೈಲುಗಳು ಸಂಚರಿಸುತ್ತಿದ್ದು, ಈ ಪೈಕಿ 25 ರೈಲುಗಳಿಗೆ ನಿಲ್ದಾಣದಲ್ಲಿ ನಿಲುಗಡೆ ಇದೆ. 7000 ಮಂದಿ ಪ್ರಯಾಣಿಕರು ಪ್ರತಿನಿತ್ಯ ಈ ರೈಲು ನಿಲ್ದಾಣದ ಮೂಲಕ ಪ್ರಯಾಣಿಸುತ್ತಿದ್ದು, ಸೋಮವಾರದಂದು ಕಾರ್ಯಾರಂಭಗೊಂಡ ಮೊದಲ ದಿನವೇ ಪ್ಲಾಟ್ ಫಾರ್ಮ್ ಟಕೇಟ್ ಇಲ್ಲದೇ ನಿಲ್ದಾಣದಲ್ಲಿದ್ದ ಕೆಲವರನ್ನು ಹಿಡಿದು ದಂಡ ವಿಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...