alex Certify
ಕನ್ನಡ ದುನಿಯಾ       Mobile App
       

Kannada Duniya

ಗಣಪತಿ ಪ್ರತಿಷ್ಠಾಪಿಸುವವರು ಪಾಲಿಸಬೇಕು ಈ ನಿಯಮ

1611Ganesh-festival_-10

ಗಣಪತಿ ಹಬ್ಬದಲ್ಲಿ ಚಂದಾ ವಸೂಲಿ ಮಾಡುವುದು ಸಾಮಾನ್ಯ. ಗಣಪತಿ ಇಡುವ ಕೆಲ ಸಂಘಗಳು ಮನೆಗಳಲ್ಲಿ, ಅಂಗಡಿಗಳಲ್ಲಿ ಬಲವಂತದಿಂದ ಚಂದಾ ವಸೂಲಿ ಮಾಡುತ್ತಾರೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಡಿವಾಣ ಹಾಕಲು ಮುಂದಾಗಿದೆ. ಅಲ್ಲದೇ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ಕೂಡ ನೀಡಲಾಗಿದೆ.

ಗಣಪತಿ ಪ್ರತಿಷ್ಟಾಪನೆಗೂ ಮೊದಲು ಆಯಾ ವ್ಯಾಪ್ತಿಯಲ್ಲಿರುವ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪೊಲೀಸ್, ಮೆಸ್ಕಾಂ, ಅಗ್ನಿಶಾಮಕ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯಬೇಕಿದೆ. ಅಲ್ಲದೇ ಗಣಪತಿ ಪೆಂಡಾಲ್ ಬಳಿ ಸಂಭವನೀಯ ಬೆಂಕಿ ದುರಂತ ತಡೆಯುವ ಸಲುವಾಗಿ ಬೆಂಕಿ ನಂದಿಸುವ ನೀರು, ಮರಳು ಇತರೆ ಸಲಕರಣೆ, ಸಾಮಗ್ರಿ ಇಟ್ಟುಕೊಳ್ಳಬೇಕಿದೆ. ಅಲ್ಲದೇ ಪೂಜೆಗೆ ಬರುವ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿರಬೇಕು.

ಗಣಪತಿ ಪೆಂಡಾಲ್ ಬಳಿ ಕಡ್ಡಾಯವಾಗಿ ಸ್ವಯಂ ಸೇವಕರು ಇರಬೇಕು. ಅಬ್ಬರದ ಧ್ವನಿವರ್ಧಕ ಬಳಸಬಾರದು. ನಿಗದಿತ ವೇಳೆಯಲ್ಲಿ ಮಾತ್ರ ಧ್ವನಿವರ್ಧಕ ಬಳಸಬೇಕು ಎಂದು ಹೇಳಲಾಗಿದೆ. ಧ್ವನಿವರ್ಧಕ ಬಳಸಲು ಪರವಾನಿಗೆ ನೀಡಲಾಗುವುದು. ಆದರೆ, ಡಿಜೆ ಮ್ಯೂಸಿಕ್ ಬಳಕೆಗೆ ಅವಕಾಶವಿಲ್ಲ. ಗಣಪತಿ ವಿಸರ್ಜನೆ ಮೆರವಣಿಗೆ ಸಾಗುವ ಮಾರ್ಗದ ವಿವರವನ್ನು ಪೊಲೀಸರಿಗೆ ಮೊದಲೇ ತಿಳಿಸಿರಬೇಕು. ಪ್ರಚೋದನಾಕಾರಿ ಭಾಷಣ, ಘೋಷಣೆ ಕೂಗಬಾರದು. ಸಿಡಿಮದ್ದು, ಪಟಾಕಿ ಸಿಡಿಸುವಾಗ ಬೇರೆಯವರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂಬ ಸೂಚನೆಗಳನ್ನು ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...